ವಾಸವಿ ವಿಶ್ವರೂಪ ದರ್ಶನ ದಿನ
ದೊಡ್ಡಬಳ್ಳಾಪುರ: ಇಲ್ಲಿನ ಶ್ರೀಮಹಾಗಣಪತಿ ದೇವಾಲಯದ ಬಳಿ ನಿರ್ಮಿಸಲು ಉದ್ದೇಶಿಸಿರುವ ಶ್ರೀಕನ್ನಿಕಾ ಪರಮೇಶ್ವರಿ ದೇವಾಲಯ ಸ್ಥಳದಲ್ಲಿ ಶ್ರೀ ವಾಸವಿ ದೇವಿಯ ವಿಶ್ವರೂಪ ದರ್ಶನ ದಿನಾಚರಣೆ ಶನಿವಾರ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗಿನಿಂದ ಸಂಜೆಯವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, 102 ಗೋತ್ರಗಳ ಶ್ರೀಸೂಕ್ತ ಹೋಮಗಳು, ಸುಮಂಗಲಿಯರಿಂದ ಗಂಗಾಪೂಜೆ ನಡೆಯಿತು. ಆದಿಶಕ್ತಿ ಎಂದು ಪರಿಭಾವಿಸುವ ಪಾರ್ವತಿ ದೇವಿ, ದುಷ್ಟ ನಿಗ್ರಹದ ಉದ್ದೇಶದಿಂದ ವಾಸವಿ ಮಾತೆಯಾಗಿ ಜನಿಸುತ್ತಾಳೆ. ಮಾಘ ಶುದ್ಧ ಬಿದಿಗೆಯಂದು ವೈಶ್ಯ ದಂಪತಿಗಳೊಂದಿಗೆ ಹೋಮಾಗ್ನಿಯಲ್ಲಿ ಸಮರ್ಪಿಸಿಕೊಂಡು ಕನ್ನಿಕಾಪರಮೇಶ್ವರಿಯಾಗಿ ವಿಶ್ವರೂಪ ದರ್ಶನ ನೀಡಿ ಲೋಕಕಲ್ಯಾಣ ಸಾಧಿಸಿದ ದಿನವನ್ನೇ ಸಾಂಕೇತಿಕವಾಗಿ ವಿಶ್ವರೂಪದರ್ಶನ ದಿನವಾಗಿ ಆಚರಿಸಲಾಗುತ್ತದೆ. ಹಲವಾರು ಮಂದಿ ಭಾಗವಹಿಸಿದ್ದರು.