ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಾಸಕ ನರೇಂದ್ರಸ್ವಾಮಿ ಮೇಲೆ ಕ್ರಮಕ್ಕೆ ಒತ್ತಾಯ

Rashmi Kasaragodu
Updated On : 2 Feb 2014, 1:23 am

ದೇವನಹಳ್ಳಿ: ವಿಧಾನಸೌಧದ ಕಲಾಪದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾದ ಎಚ್. ಆಂಜನೇಯ ಅವರ ಮೇಲೆ ದೌರ್ಜನ್ಯ ಎಸಗಲು ಯತ್ನಿಸಿದ ಶಾಸಕ ನರೇಂದ್ರ ಸ್ವಾಮಿಯವರ ವರ್ತನೆಯನ್ನು ಇಲ್ಲಿನ ಕರ್ನಾಟಕ ಮಾದಿಗ ದಂಡೋರ ಹೋರಾಟ ಸಮಿತಿ ಅಧ್ಯಕ್ಷ ಜಿ.ಮಾರಪ್ಪ ಶನಿವಾರ ಪ್ರವಾಸಿ ಮಂದರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಖಂಡಿಸಿದ್ದಾರೆ. ಸದನದ ಘನತೆಗೆ ಅಗೌರವ ತೋರಿಸಿರುವ ಶಾಸಕ ನರೇಂದ್ರ ಸ್ವಾಮಿ ತಮ್ಮ ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಅವರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಕಾರ್ಯದರ್ಶಿ ಎಲ್. ಮುನಿರಾಜು ತಿಳಿಸಿ  ಮುಖ್ಯಮಂತ್ರಿಗಳು ನರೇಂದ್ರ ಸ್ವಾಮಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ  ಎಚ್. ನರಸಿಂಹಮೂರ್ತಿ, ಬುಳ್ಳಹಳ್ಳಿ ಮುನಿರಾಜು, ಕೆ.ಎಂ.ದೇವರಾಜ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement