ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಾಹಸ ಕಲೆಗಳು ಜೀವಂತ: ಗೊರುಚ

Rashmi Kasaragodu
Updated On : 2 Feb 2014, 1:26 am

ರಾಮನಗರ: ಪ್ರಾಚೀನ ಭಾರದ ಇತಿಹಾಸದಿಂದ ಹುಟ್ಟಿ ಬಂದಿರುವ ಸಾಹಸ ಕಲೆಗಳು ಇನ್ನೂ ಜೀವಂತವಾಗಿವೆ. ಅವನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು.  
ನಗರದ ಕರ್ನಾಟಕ ಸಾಹಸ ಕಲಾ ಅಕಾಡೆಮಿ ಕೇಂದ್ರದಲ್ಲಿ ನಡೆದ ಅಂತಾರಾಜ್ಯ ಜಾನಪದ ಸಾಹಸಿಗರ ಜಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಚೀನ ಸಾಹಸ ಕಲೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದರು.
ನಾಟಕಕಾರ ಮಲ್ಲಿಕಾರ್ಜುನ ಮಹಾಮನೆ ಮಾತನಾಡಿ, ಸಾಹಸ ಕಲೆ ಮತ್ತು ಜಾನಪದ ನಾಟಕ ಕಲೆಗಳಿಂದ ಮಾನವನ ಆರೋಗ್ಯ ವಣದ್ಧಿಯ ಜತೆಗೆ ಮನೋ ವಿಕಾಸ ಮೂಡುತ್ತದೆ ಎಂದು ತಿಳಿಸಿದರು. ನಾಟಕ ಅಕಾಡೆಮಿಯ ಮಾಜಿ ಸದಸ್ಯೆ ಶ್ರೀಮತಿ ಗೀತಾ, ಶ್ರೀನಿವಾಸಮೂರ್ತಿ, ಎಂ.ಪಿ.ಪ್ರಕಾಶ್, ಚೆಲುವರಾಜು, ಹಾಸನ ರಘು ಭಾಗವಹಿಸಿದ್ದರು. ಅಂತರರಾಜ್ಯ ಜಾನಪದ ಕಲಾ ತಂಡಗಳು ಹಾಗೂ ಜಾನಪದ ಸಾಹಸಿಗರಿಂದ ಪ್ರದರ್ಶನ ನಡೆಯಿತು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement