6ರಂದು ಬ್ರಹ್ಮ ರಥೋತ್ಸವ
ಮಾಗಡಿ: ಮಾಗಡಿ ಪಟ್ಟಣದ ಐತಿಹಾಸಿಕ ಪ್ರಸಿದ್ಧ ಸೋಮೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಬ್ರಹ್ಮ ರಥೋತ್ಸವ ಫೆ.6 ರಂದು ಮಧ್ಯಾಹ್ನ 12.30 ರಿಂದ 1.30 ರೊಳಗೆ ನೆರವೇರಲಿದೆ ಎಂದು ದೇವಾಲಯದ ಆಗಮಿಕ ಗೋಪಾಲ್ ದೀಕ್ಷಿತ್ ತಿಳಿಸಿದರು. ತಹಸಿಲ್ದಾರ್ ಶಿವಕುಮಾರ್ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
9ರಂದು ನೃತ್ಯ ವೈಭವ ಕಾರ್ಯಕ್ರಮ
ಮಾಗಡಿ: ಮಾಗಡಿ ಪಟ್ಟಣದ ತಿರುಮಲೆ ರಂಗನಾಥಸ್ವಾಮಿ ದೇವಾಲಯ ಮುಂಭಾಗದಲ್ಲಿ ಶ್ರೀರಂಗ ಸೇವಾ ಟ್ರಸ್ಟ್ ವತಿಯಿಂದ ಫೆ.9 ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆವಿಗೂ ಕನಕ-ಪುರಂದರ-ತ್ಯಾಗರಾಜ ನಮನ ಮತ್ತು ಸಂಗೀತ ಮತ್ತು ನೃತ್ಯ ವೈಭವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಟಿ.ಎಸ್. ಸತೀಶ್ ತಿಳಿಸಿದ್ದಾರೆ.