ಜಾನಪದ ಸಮೂಹ ಗಾಯನ ಕಾರ್ಯಕ್ರಮ
ಬೆಂಗಳೂರು: ರಂಗ ಸಂಸ್ಥಾನ 'ಕ್ವಾರಣ್ಯ ನೀಡಮ್ಮ....!' ಎಂಬ ಹೆಸರಿನಲ್ಲಿ 1101 ಜನಪದ ಗಾಯಕರಿಂದ ಜಾನಪದ ಸಮೂಹ ಗಾಯನ ಕಾರ್ಯಕ್ರಮ ಏರ್ಪಡಿಸಿದೆ. ಕಾರ್ಯಕ್ರಮ ಫೆ.4ರಂದು ಸಂಸ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಬಂಡ್ಲಳ್ಳಿ ವಿಜಯಕುಮಾರ್ ಅವರು ಈ ಸಮೂಹ ಗಾಯನವನ್ನು ಪರಿಕಲ್ಪಿಸಿ ನಿರ್ದೇಶಿಸಿದ್ದಾರೆ.
ಜಾನಪದ ಗೀತ ಗಾಯನದಲ್ಲಿ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ರಂಗಸಂಸ್ಥಾನ ಈ ರೀತಿಯ ಮಹತ್ವದ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ರಂಗಸಂಸ್ಥಾನದ ಸಂಚಾಲಕ ಬಿ.ಎನ್. ಹರೀಶ್ ಕುಮಾರ್ ತಿಳಿಸಿದ್ದಾರೆ.