ಮಂಕುತಿಮ್ಮನಕಗ್ಗದ ವಾಚನ, ವ್ಯಾಖ್ಯಾನ ಸ್ಪರ್ಧೆ
ಕನಕಪುರ: ಕನಕಪುರದ ಲಕ್ಷ್ಮಣ್ ಲೇಔಟ್ನಲ್ಲಿರುವ ಲಿಟಲ್ ಹಾರ್ಟ್ಸ್ ಎಲಿಮೆಂಟರಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ದಿ.ಡಿ.ವಿ.ಗುಂಡಪ್ಪನವರ ಸ್ಮರಣಾರ್ಥ ತಾಲೂಕು ಮಟ್ಟದ ಕಗ್ಗದಸಿರಿ - ಮಂಕುತಿಮ್ಮನಕಗ್ಗದ ವಾಚನ ಹಾಗೂ ವ್ಯಾಖ್ಯಾನ ಸ್ಪರ್ಧೆ ಮಾಧ್ಯಮಿಕ ಶಾಲಾ ಮಕ್ಕಳಿಗಾಗಿ ನಡೆಯಿತು. ಸ್ಪರ್ಧೆಯಲ್ಲಿ ತಾಲೂಕಿನ ವಿವಿಧ ಶಾಲೆಗಳ 30ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಇಂಪಾಗಿ ವಾಚನ ಹಾಗೂ ವ್ಯಾಖ್ಯಾನ ನೀಡಿದರು. ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷ ಮಹದೇವ ಪ್ರಸಾದ್ ನೆರವೇರಿಸಿದರು. ಕಾರ್ಯದರ್ಶಿ ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿರ್ದೇಶಕಿ ರಮ್ಯಾರಾಣಿ, ನಾಗರಾಜು, ಪ್ರಾಂಶುಪಾಲ ಶಿವಶಂಕರ್, ಆದರ್ಶ ವಿದ್ಯಾಶಾಲೆಯ ಗುಂಡಣ್ಣ ಆಗಮಿಸಿದ್ದರು. ಪತ್ರಕರ್ತ ಸತೀಶ್ ಹಾಗೂ ಉಪನ್ಯಾಸಕಿ ಪುಷ್ಪಲತಾ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಕಗ್ಗದಸಿರಿ ಪರ್ಯಾಯ ಪಾರಿತೋಷಕ ಸತತ ಮೂರು ವರ್ಷಗಳ ಕಾಲ ಪ್ರಥಮ ಸ್ಥಾನ ಪಡೆದ ಕನಕಪುರದ ಬ್ಲಾಸಂ ಮಾಧ್ಯಮಿಕ ಶಾಲೆ ಪಾಲಾಯಿತು. ವೈಯಕ್ತಿಕ ಪ್ರಥಮ ಬಹುಮಾನ ಬ್ಲಾಸಂ ಶಾಲೆಯ ಬೇಬಿ ಭೂಮಿಕಾ, ದ್ವಿತೀಯ ಸ್ಥಾನ ಲಿಟಲ್ ಹಾರ್ಟ್ಸ್ ಶಾಲೆಯ ಬೇಬಿ ಪ್ರೇಕ್ಷಿತಾ, ತೃತೀಯ ಬಹುಮಾನ ಆದರ್ಶ ವಿದ್ಯಾಶಾಲೆಯ ಬೇಬಿ ಕೆ.ಪಿ.ಶರಣ್ಯಾ ಪಡೆದರು. ಶಿಕ್ಷಕ ಅಮೀರ್ ಸ್ವಾಗತಿಸಿದರು. ಶಿಕ್ಷಕಿ ಭವಾನಿ ನಿರೂಪಿಸಿದರು. ಮುಖ್ಯ ಶಿಕ್ಷಕ ಶಿವಶಂಕರ್ ವಂದಿಸಿದರು.