ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೀಗ ಒಡೆದು 2 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಕಳವು

Rashmi Kasaragodu
Updated On : 4 Feb 2014, 1:44 am

ನೆಲಮಂಗಲ: ಪಟ್ಟಣದ ತಿಮ್ಮಶೆಟ್ಟಿ ಬಡಾವಣೆಯ ಮನೆಯೊಂದರಲ್ಲಿ  ಬೀಗ ಒಡೆದು ಕಳ್ಳರು ಸೋಮವಾರ ಮಧ್ಯಾಹ್ನ  ಮನೆಯಲ್ಲಿದ್ದ 50 ಗ್ರಾಂ ಚಿನ್ನ  ಒಂದೂವರೆ ಕೆ.ಜಿ ಬೆಳ್ಳಿ ಸೇರಿ ಸುಮಾರು 2 ಲಕ್ಷ ರು. ಬೆಲೆ ಬಾಳುವ ಚಿನ್ನಾಭರಣವನ್ನು ದೋಚಿಕೊಂಡು ಹೋಗಿರುವ ಘಟನೆ ಸಂಭವಿಸಿದೆ.
ಮನೆ ಮಾಲೀಕ ರಾಜಣ್ಣ ಹಾಗೂ ಅವರ ಪತ್ನಿ  ಹೊರಗಡೆ ಹೋಗಿರುವುದನ್ನು ಗಮನಿಸಿರುವ ದುಷ್ಕರ್ಮಿಗಳು ಮನೆಯ ಮುಂಬಾಗಿಲಿನ ಬೀಗವನ್ನು ಹಾರೆಯಿಂದ ಒಡೆದು ಬೀರುವಿನಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಮನೆ ಬಾಗಿಲನ್ನು ಹೊಡೆದು ಕಳ್ಳತನವಾಗಿರುವುದನ್ನು ಕಂಡ ಮನೆಯ ಮಾಲೀಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಟ್ಟಣದಲ್ಲಿ ಕಳೆದ ಒಂದು ತಿಂಗಳಿಂದ ಅತಿ ಹೆಚ್ಚು ಕಳ್ಳತನ ಪ್ರಕರಣಗಳು ಸಂಭವಿಸುತ್ತಿರುವುದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement