ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಸಾಹಿತ್ಯ ಕ್ಷೇತ್ರ ರಾಜಕೀಯ ಒಡ್ಡೋಲಗವಾಗಿದೆ'

Rashmi Kasaragodu
Updated On : 4 Feb 2014, 1:44 am

ಚನ್ನಪಟ್ಟಣ: ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರ ರಾಜಕೀಯ ಒಡ್ಡೋಲಗವಾಗಿ ಪರಿಣಮಿಸಿದ್ದು ಇದರಿಂದಾಗಿ ಸೃಜನಶೀಲ ಸಾಹಿತಿಗಳು ಸಾಹಿತ್ಯ  ಕೃಷಿಯಿಂದ ದೂರ ಉಳಿಯುವಂತಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ವಿಷಾದಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ದೊಡ್ಡಾಲಹಳ್ಳಿ ಪುಟ್ಟಸ್ವಾಮಿ ಗೌಡರ ಅದ್ವಾನ ಕೃತಿಯನ್ನು ಬಿಡುಗಡೆ ಹಾಗೂ ಬೇಂದ್ರೆ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಜಕೀಯದ ಕಪಿಮುಷ್ಟಿಗೆ ಸಾರಸ್ವತ ಲೋಕವೂ ಸಿಲುಕಿದ್ದು ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಪ್ರಜ್ಞಾವಂತ ಸಮುದಾಯ ಈ ಅಪಾಯದಿಂದ ಸಾಹಿತ್ಯ ಕ್ಷೇತ್ರವನ್ನು ಹೊರತರಲು ಮುಂದಾಗಬೇಕಿದೆ ಎಂದು ಕರೆ ನೀಡಿದರು.
ಕೃತಿ ಕುರಿತು ಮಾತನಾಡಿದ ಕನ್ನಡ ಪ್ರಾಧ್ಯಾಪಕ ಡಾ. ಮಧುಸೂದನಾಚಾರ್ಯ ಜೋಷಿ, ಹನಿಗವನ ಹಾಗೂ ಮುಕ್ತ ಚುಟುಕುಗಳು ಓದುಗನಿಗೆ ಸಮಸ್ಯೆಯ ತೀವ್ರತೆಯನ್ನು ಅತ್ಯಂತ ಮೊನಚಾಗಿ ಮುಟ್ಟಿಸುವ ಸಾಹಿತ್ಯ ಪ್ರಕಾರಗಳಾಗಿದ್ದು, ಸಮಕಾಲೀನ ಸಮಸ್ಯೆಗಳನ್ನು ತೀಕ್ಷ್ಣವಾಗಿ ಹೇಳುವ ಶಕ್ತಿ ಈ ಸಾಹಿತ್ಯ ಪ್ರಕಾರಗಳಿಗಿವೆ ಎಂದರು.
ಅನನ್ಯವಾದುದು: ಕನ್ನಡ ಸಹಾಯಕ ಪ್ರಾಧ್ಯಾಪಕ ಆರ್. ಪದ್ಮನಾಭ,  ಬೇಂದ್ರೆ ಕುರಿತು ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬೇಂದ್ರೆ ನೀಡಿರುವ ಅಚ್ಚರಿ, ಭಾವತೀವ್ರತೆ ಅನನ್ಯವಾದುದು. ಶ್ರೀಸಾಮಾನ್ಯನ ಜೀವನದ ನೋವು ನಲಿವು, ಸರಸ ವಿರಸಗಳನ್ನು ಮನಮುಟ್ಟುವಂತೆ ಚಿತ್ರಿಸಿ ಕೊಟ್ಟ ಮಹಾನ್ ಸಾಹಿತಿ ಬೇಂದ್ರೆ ಕಡುಬಡತನವನ್ನೇ ಉಂಡು ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದರು ಎಂದರು.
ಕವಿಗೋಷ್ಠಿಯಲ್ಲಿ ಎಮ್.ಟಿ.ನಾಗರಾಜು, ವಿ.ಪಿ ವರದರಾಜು ಸೇರಿದಂತೆ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕವನ ವಾಚಿಸಿದರು.
ರಾಂಪುರ ಸಿದ್ಧರಾಜು ಅವರು ಗೀತಗಾಯನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ  ಕಾಲೇಜಿನ ಪ್ರಾಂಶುಪಾಲ ಎಸ್. ಲಿಂಗಣ್ಣಯ್ಯ ಪುಸ್ತಕ ಬಿಡುಗಡೆ ಗೊಳಿಸಿದರು.
 ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬಿ.ಟಿ ನೇತ್ರಾವತಿ ಗೌಡ, ಕುಸುಮ, ದೊಡ್ಡಆಲಹಳ್ಳಿ ಡಿ. ಪುಟ್ಟಸ್ವಾಮಿಗೌಡ ಶಿವಕುಮಾರ್, ರವಿಕಿರಣ್, ಈಶ್ವರ್, ಮಂಜು, ದಿವ್ಯ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement