ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿವಿಧ ಹಾಲು ಸಹಕಾರ ಸಂಘಗಳಿಗೆ ಆಯ್ಕೆ

Vishwanath S
Updated On : 5 Feb 2014, 12:19 pm

ಚನ್ನಪಟ್ಟಣ: ತಾಲೂಕಿನ ವಿವಿಧ ಹಾಲು ಉತ್ಪಾದಕರ ಸಂಘಗಳ ನಿರ್ದೇಶಕ ಸ್ಥಾನಕ್ಕೆ  ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿ ಮುಕ್ತಾಯ ಗೊಂಡಿದ್ದು.
ಮಳೂರುಪಟ್ಟಣದಲ್ಲಿ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿದ್ದನ್ನು ಹೊರತು ಪಡಿಸಿದರೆ, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.
ಮಳೂರುಪಟ್ಟಣದಲ್ಲಿ ಚಕಮಕಿ: ಮಳೂರುಪಟ್ಟಣ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆ ಬಿರುಸಿನಿಂದ ಕೂಡಿತ್ತು. ಬೆಳಿಗ್ಗಿನಿಂದಲೂ ಮತಕೇಂದ್ರದ ಸುತ್ತ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುವ ಮೂಲಕ ಚುನಾವಣೆ ಖದರು ಹೆಚ್ಚಿಸಿದ್ದರು.
ಮಳೂರುಪಟ್ಟಣ ಎಂಪಿಸಿಎಸ್ ಚುನಾವಣೆ ವೇಳೆ ಜೆಡಿಎಸ್ ಮತ್ತು ಸಮಾಜವಾದಿ ಪಕ್ಷದ ಕಾರ್ಯಕರ್ತರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಎರಡೂ ಗುಂಪನ್ನು ಚದುರಿಸಿ ಶಾಂತಿಯುತ ವಾಗಿ ಚುನಾವಣೆ ನಡೆಯಲು ಸಹಕರಿಸಿದರು.
ಜೆಡಿಎಸ್ ಗೆಲವು: ಮಳೂರುಪಟ್ಟಣ ಎಂಪಿಸಿಎಸ್ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ 11 ಮಂದಿ ಆಯ್ಕೆ ಗೊಂಡಿದ್ದಾರೆ. ಕೆ.ಪುಟ್ಟಸ್ವಾಮಯ್ಯ ಮತ್ತು ಸಿದ್ದೇಗೌಡ ನೇತೃತ್ವದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಕೆಂಪೇಗೌಡ, ಚಾಮೇಗೌಡ, ಪುಟ್ಟಸ್ವಾಮಿ, ಪಾಪಣ್ಣ, ರಮೇಶ್, ಎಲ್.ಲಿಂಗೇಗೌಡ, ಶಿವಲಿಂಗೇಗೌಡ, ಜಯಲಿಂಗು, ಗುರುಲಿಂಗಯ್ಯ, ಜಯಮ್ಮ, ನಿಂಗಮ್ಮ ಅವರು ಆಯ್ಕೆ ಗೊಂಡಿದ್ದಾರೆ.
ಹೊಂಗನೂರು ಎಂಪಿಸಿಎಸ್: ತಾಲೂಕಿನ ಹೊಂಗನೂರು ಎಂಪಿಸಿಎಸ್ ಅಧ್ಯಕ್ಷಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ11 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ನಾಮಪತ್ರ ಸಲ್ಲಿಕೆ ಕೊನೆಯ ದಿನ ವರೆಗೆ 11 ಮಂದಿ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಆಶಾ ಅವಿರೋಧ ಆಯ್ಕೆಯನ್ನು ಘೋಷಿಸಿದ್ದಾರೆ.
ಗ್ರಾಮದ ಶ್ರೀನಿವಾಸ ರಾಜೇಅರಸ್, ನಾರಾಯಣಸ್ವಾಮಿ ರಾಜೇ ಅರಸು, ವೆಂಕಟಗಿರೀಗೌಡ, ರಾಮಕೃಷ್ಣ,ಕೃಷ್ಣ, ಕೆ.ಪಿ.ಶಿವಣ್ಣ,ರಮೇಶ್,ವೆಂಕಟಮ್ಮಣ್ಣಿ, ಸೋಜಮ್ಮಣ್ಣಿ, ದೇವೀರಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮತ ಹಾಕಿದ್ದು 10 ಮಂದಿ: ತಾಲೂಕಿನ ಜೆ.ಬ್ಯಾಡರಹಳ್ಳಿ ಎಂಪಿಸಿಎಸ್ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಗ್ರಾಮಸ್ಥರು ಅವಿರೋಧಕ್ಕೆ ಮನಸ್ಸು ಮಾಡಿದ ಹಿನ್ನೆಲೆಯಲ್ಲಿ ಕೇವಲ ಗ್ರಾಮಸ್ಥರು ನಿರ್ಧರಿಸಿದ 10 ಮಂದಿ ಅಭ್ಯರ್ಥಿಗಳು ಮಾತ್ರ ಮತ ಚಲಾವಣೆ ಮಾಡಿಕೊಂಡು ಆಯ್ಕೆಯಾದ ವಿಶೇಷ ಘಟನೆ ನಡೆಯಿತು.
ಗ್ರಾಮದ ತಿಮ್ಮೇಗೌಡ, ಈರಮ್ಮ, ಕಮಲಮ್ಮ, ಕೆಂಚೇಗೌಡ, ಅಣ್ಣೇಗೌಡ, ಶಿವಲಿಂಗೇಗೌಡ, ಮಾಯೀಗೌಡ, ಬಸವಯ್ಯ, ಬಿ.ಸಿ.ಚೌಡೇಗೌಡ, ಜಯರಾಮು ಅವರನ್ನು ಆಯ್ಕೆಮಾಡಲಾಯಿತು. ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದದಲ್ಲಿ 163 ಮಂದಿ ಸದಸ್ಯರಿದ್ದರೂ ಗ್ರಾಮದ ಮುಖಂಡರ ಮಾತಿಗೆ ಬೆಲೆ ಕೊಟ್ಟು ಯಾರೂ ಮತಚಲಾಯಿಸಲು ಮುಂದೆ ಬರಲಿಲ್ಲ.
ಹರೂರುರಲ್ಲಿ ಅವಿರೋಧ ಆಯ್ಕೆ: ತಾಲೂಕಿನ ಹರೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ11 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಗೊಂಡಿದ್ದಾರೆ. ಗ್ರಾಮದ ಕೃಷ್ಣೇಗೌಡ, ಎಚ್.ಎಂ.ಶಿವಣ್ಣ, ಗಂಗರಾಜು, ಲಿಂಗೇಗೌಡ, ನಾಗರಾಜೇಗೌಡ, ಟಿ.ಕರಿಯಪ್ಪ, ಎಚ್.ಕೆ.ಚಲವಯ್ಯ, ಯಳವಯ್ಯ, ಮರಿಯಮ್ಮ, ಪುಟ್ಟಮ್ಮ, ವಿಷಕಂಠ ಆಯ್ಕೆಯಾಗಿದ್ದಾರೆ
ಎಂದು ಚುನಾವಣಾಧಿಕಾರಿ ರುದ್ರಯ್ಯ ಪ್ರಕಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement