ಚಿಕ್ಕಮುದಿಗೆರೆ ಗ್ರಾಪಂಗೆ ನೂತನ ಉಪಾಧ್ಯಕ್ಷ ಪಿ.ಎಚ್. ರಾಜಣ್ಣ
ಮಾಗಡಿ: ಚಿಕ್ಕಮುದಿಗೆರೆ ಗ್ರಾಮ ಪಂಚಾಯ್ತಿಗೆ ನೂತನ ಉಪಾಧ್ಯಕ್ಷರಾಗಿ ಪಿ.ಎಚ್. ರಾಜಣ್ಣ ಅವಿರೋಧವಾಗಿ ಆಯ್ಕೆಯಾದರು.
ಇದೇ ವೇಳೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಪಿ.ಎಚ್. ರಾಜಣ್ಣ ಮಾತನಾಡುತ್ತಾ ಎಲ್ಲಾ ಸದಸ್ಯರು ಹೆಚ್ಚಿನ ರೀತಿಯಲ್ಲಿ ಸಹಕಾರ, ಪ್ರೋತ್ಸಾಹ ನೀಡಿದ್ದಾರೆ. ಸದಸ್ಯರ ಸಹಕಾರ ಹಾಗೂ ಪಂಚಾಯ್ತಿ ಅಧ್ಯಕ್ಷ ಜೆ.ಆರ್. ರವೀಶ್ ಮಾರ್ಗದರ್ಶನದಲ್ಲಿ ಪಂಚಾಯ್ತಿಯ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಾಮಾಣಿಕವಾಗಿ ದುಡಿಯುತ್ತೇನೆ. ನೀರಿನ ಸಮಸ್ಯೆ ನಿವಾರಣೆಗೆ ವಿಶೇಷ ಗಮನ ಹರಿಸಲಾಗುವುದು ಎಂದರು.
ಶಾಸಕ ಎಚ್.ಸಿ. ಬಾಲಕೃಷ್ಣ, ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಕೆ.ಧನಂಜಯ, ಬಿಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್. ಅಶೋಕ್, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಜಿ.ಪಂ. ಸದಸ್ಯ ಧನಂಜಯ, ಚಿಕ್ಕಮುದಿಗೆರೆ ಗ್ರಾ.ಪಂ. ಅಧ್ಯಕ್ಷ ಜೆ.ಆರ್. ರವೀಶ್, ಚಂದ್ರಣ್ಣ, ಗಂಗರಾಜು, ಶಿವರಾಜು, ಬಿ.ಎನ್.ಪಾಳ್ಯದ ಲೋಕೇಶ್, ರಾಜಣ್ಣ, ಚಿಕ್ಕರಂಗಯ್ಯ, ಮಾಜಿ ಅಧ್ಯಕ್ಷ ಕುಮಾರ್, ರಾಮಚಂದ್ರಯ್ಯ, ರೇವಣ್ಣ, ಶಿವಕುಮಾರ್ ಇತರರು ನೂತನ ಉಪಾಧ್ಯಕ್ಷ ಪಿ.ಎಚ್. ರಾಜಣ್ಣ ಅವರಿಗೆ ಹಾರ ಹಾಕಿ ಅಭಿನಂದಿಸಿದರು.