ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಿಲ್ಲಾಧಿಕಾರಿಗಳ ಭೇಟಿ ಬೇಕಾಗಿಲ್ಲ: ಶಿವಪ್ಪ ಆಕ್ರೋಶ

Vishwanath S
Updated On : 8 Feb 2014, 12:39 pm

ದೇವನಹಳ್ಳಿ:  ದೇವನಹಳ್ಳಿ ಮಿನಿ ವಿಧಾನಸೌಧಕ್ಕೆ ಅನ್ಯ ಕಾರ್ಯ ನಿಮಿತ್ತ ಜಿಲ್ಲಾಧಿಕಾರಿಗಳು ಶುಕ್ರವಾರ ಆಗಮಿಸಿದ್ದ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ವೆಂಕಟರಾಜು ಧರಣಿ ನಿರತರಲ್ಲಿಗೆ ಆಗಮಿಸಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡುವಂತೆ ತಿಳಿಸಿದಾಗ ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಶಿವಪ್ಪ ಹಾಗೂ ಜೆಡಿಯು ಶ್ರೀನಿವಾಸ್ ನಿರಾಕರಿಸಿದರು.
ಕಳೆದ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ನಮ್ಮ ಧರಣಿ ಸ್ಥಳಕ್ಕೆ ಆಗಮಿಸಿ ನಮ್ಮ ಎಲ್ಲ ಮನವಿಗಳನ್ನು ಕೇಳಿ ಸಕಾರಾತ್ಮಕವಾಗಿ ಸ್ಪಂದಿಸಿಹೋದ ಕೆಲವೇ ಗಂಟೆಗಳಲ್ಲಿ ದೊಡ್ಡಬಳ್ಳಾಪುರಕ್ಕೆ ಉಪವಿಭಾಗಾಧಿಕಾರಿಗಳ ಕಚೇರಿ ವರ್ಗಾವಣೆಯಾಗಿರುವ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿತು. ಈಗೇನಾದರು ನಾವು ಮತ್ತೆ ಮನವಿ ಕೊಟ್ಟರೆ ಜಿಲ್ಲಾಧಿಕಾರಿಗಳ ಕಚೇರಿಯನ್ನು ಅಲ್ಲಿಗೆ ವರ್ಗಾವಣೆ ಮಾಡಬಹುದು. ಆದ್ದರಿಂದ ಜಿಲ್ಲಾಧಿಕಾರಿಗಳ ನಮ್ಮಲಿಗೇ ಆಗಲಿ ಅಥವಾ ನಾವು ಅವರ ಬಳಿ ಹೋಗುವುದಾಗಲಿ ಬೇಕಾಗಿಲ್ಲ. ಬದಲಾಗಿ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮಲ್ಲಿಗೆ ಬರಲಿ ಅವರಿಗೆ ನಮ್ಮ ಮನವಿ ನೀಡುತ್ತೇವೆ  ಎಂದು ಖಡಕ್ಕಾಗಿ ತಿಳಿಸಿದಾಗ ತಹಸೀಲ್ದಾರರು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸಾದರು. ಮಿನಿ ವಿಧಾನಸೌಧದಿಂದ  ಜಿಲ್ಲಾಧಿಕಾರಿಗಳು ಅನ್ಯ ಕಾರ್ಯ ನಿಮಿತ್ತ ತಹಸೀಲ್ದಾರರೊಂದಿಗೆ ತೆರಳಿದರು.  
ಕಳೆದ 19 ದಿನಗಳಿಂದ ಜಿಲ್ಲಾ ಹೋರಾಟ ಸಮಿತಿಯವರು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಧರಣಿ ನಡೆಸುತ್ತಿದ್ದು ಶನಿವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್‌ಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಡಾ.ನರಸಿಂಹಮೂರ್ತಿ, ಸೂರ್ಯಕಲಾ ಮೂರ್ತಿ, ಜಿಲ್ಲಾ ರೈತ ಸಂಘದ ಅಧ್ಯಕ್ಷ ವೆಂಕಟನಾರಾಯಣಪ್ಪ, ಸಾವುಕನಹಳ್ಳಿ ಗೋಪಾಲಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ರಾಜಗೋಪಾಲ್, ಎ.ಸಿ.ಗುರುಸ್ವಾಮಿ, ಸುವರ್ಣ ಕರ್ನಾಟಕ ಜನಶಕ್ತಿ ಸಂಘದ ಅಧ್ಯಕ್ಷ ರವಿಕುಮಾರ್ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement