ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗ್ರಾಮ ಜೀವನ ಪಾಠ ಅನನ್ಯ: ಶಾಸಕ

Vishwanath S
Updated On : 13 Feb 2014, 1:30 am

ದೊಡ್ಡಬಳ್ಳಾಪುರ: ಗ್ರಾಮ ಜೀವನ ಕಲಿಸುವ ಪಾಠ ಅನನ್ಯ. ಬದುಕಿನ ಉತ್ಸಾಹವನ್ನು ಮತ್ತು ಸೋಲು-ಗೆಲವುಗಳ ಸಮನ್ವಯವನ್ನು ನಾವಿಲ್ಲಿ ಕಾಣಬಹುದು ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ತಾಲೂಕಿನ ಮರಳೇನಹಳ್ಳಿ ಗ್ರಾಮದಲ್ಲಿ ಕೊಂಗಾಡಿಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ನೇತೃತ್ವದಲ್ಲಿ ನಡೆದ 7 ದಿನಗಳ ವಿಶೇಷ ಯುವಜನ ಸೇವಾ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಇಂದಿನ ಯುವ ಜನಾಂಗ ಶ್ರಮಶಕ್ತಿಯಲ್ಲಿ ಆಸಕ್ತರಾಗಿಲ್ಲ. ಟಿವಿ ಮತ್ತು ಮೊಬೈಲ್‌ಗಳೇ ಜೀವನದ ಶಕ್ತಿಗಳೆಂದು ತಿಳಿದುಕೊಂಡಿದ್ದಾರೆ. ಇದರಿಂದ ಹಣ ಮತ್ತು ಸಮಯದ ವ್ಯಯ ಆಗುತ್ತಿದೆಯೇ ಹೊರತು ಬೇರೇನೂ ಅಲ್ಲ. ಈಗಲೂ ಗ್ರಾಮೀಣ ಭಾಗದ ಹಿರಿಯ ಜೀವಗಳು ಜೀವನಾನುಭವದ ಮಾದರಿ ರೂಪಗಳಾಗಿ ಗೋಚರಿಸುತ್ತಾರೆ. ಪ್ರಕೃತಿ ಸಹಜವಾಗಿ ಬರುವ ಅನುಭಾವಗಳು ಎಂದಿಗೂ ಪರಿಪೂರ್ಣವಾಗಿರುತ್ತವೆ ಎಂದರು.
ಕೆಲಸದಲ್ಲಿ ಕೀಳರಿಮೆ ಇರಬಾರದು. ವಿದ್ಯಾಭ್ಯಾಸದ ಜೊತೆಗೆ ಸಮಾಜಸ್ನೇಹಿಯಾದ ಕೆಲಸಗಳನ್ನು ಮಾಡುವ ಉತ್ಸಾಹ ಬೆಳೆಸಿಕೊಳ್ಳಬೇಕು. ಇದರಿಂದ ನಿರುದ್ಯೋಗ ಮತ್ತಿತರ ಸಮಸ್ಯೆಗಳ ನಿವಾರಣೆ ಸಾಧ್ಯ. ಗ್ರಾಮೀಣ ಪ್ರದೇಶದ ಜನಕ್ಕೆ ಆಲೋಚನೆಗಳನ್ನು ಬಿತ್ತುವ ಮೂಲಕ ನೈರ್ಮಲ್ಯ, ಶಿಕ್ಷಣ, ಆರೋಗ್ಯದ ಅರಿವು ಮೂಡಿಸಬೇಕು ಎಂದರು.
ಜಿಪಂ ಸದಸ್ಯೆ ಕಲ್ಪನಾ, ತಾಪಂ ಸದಸ್ಯೆ ಮಂಜುಳಾ, ಗ್ರಾಪಂ ಸದಸ್ಯ ಉಗ್ರೇಗೌಡ, ಶಾರದಮ್ಮ, ರಾಜಣ್ಣ, ತಾಪಂ ಮಾಜಿ ಸದಸ್ಯ ಕೆಂಪಣ್ಣ, ಚಿಕ್ಕಮುನಿಶಾಮಯ್ಯ, ಎಂಪಿಸಿಎಸ್ ಅಧ್ಯಕ್ಷ ಆರ್.ಬಸವರಾಜು, ಎಸ್‌ಡಿಎಂಸಿ ಅಧ್ಯಕ್ಷ ಎಂ.ಎಚ್.ಮುನೇಗೌಡ, ಶಾಲಾ ಮುಖ್ಯ ಶಿಕ್ಷಕಿ ಉಮಾ, ಕೊಂಗಾಡಿಯಪ್ಪ ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಟಿ.ಮಹದೇವ್, ಶಿಬಿರಾಧಿಕಾರಿ ಪ್ರೊ. ಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement