ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪೌರಾಣಿಕ ನಾಟಕದ ಉದ್ಘಾಟನೆ

Vishwanath S
Updated On : 14 Feb 2014, 11:35 am

ಕನಕಪುರ: ಹವ್ಯಾಸೀ ರಂಗಭೂಮಿ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರ ಪ್ರೀತಿ ಒತ್ತಾಸೆಗಳಿಂದ ಜೀವಂತವಾಗಿ ಉಳಿದಿದೆ, ಸಂಘಸಂಸ್ಥೆಗಳು ಪ್ರೊತ್ಸಾಹ ನೀಡದಿದ್ದರೆ ರಂಗಕಲೆ ಅಳಿವಿನತ್ತ ನಡೆಯುವುದು ನಿಶ್ಚಿತ ಎಂದು ಡಾ.ಟಿ.ಎನ್. ವಿಜಯ ಕುಮಾರ್ ಹೇಳಿದ್ದಾರೆ.
ಅವರು ಕನಕಪುರದ ನಾಡೋಜ ಡಾ.ರಾಜ್‌ಬಯಲು ರಂಗಮಂದಿರದಲ್ಲಿ ರಂಗಬಾಂಧವ್ಯ ಸಂಸ್ಥೆಯು ದಿ.ಕೆ.ಎಂ. ರಾಮಕೃಷ್ಣಪ್ಪ ಸಂಸ್ಮರಣೋತ್ಸವ ಅಂಗವಾಗಿ ಆಯೋಜಿಸಿದ್ದ ಶ್ರೀಕೃಷ್ಣ ರಾಯಭಾರ ಪೌರಾಣಿಕ ನಾಟಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ತಿಮ್ಮೇಗೌಡ ಅಧ್ಯಕ್ಷತೆ ವಹಿಸಿದ್ದರು.
   ಸಮಾರಂಭದ ಮುಖ್ಯಅತಿಥಿಗಳಾಗಿ ಉದಯಕಲಾನಿಕೇತನದ ಸಂಚಾಲಕಿ ರೇಣುಕಾಬಾಲಿ ಉದಯಕುಮಾರ್, ಸುಶೀಲಮ್ಮ, ರಂಗಬಾಂಧವ್ಯದ ಮಹಾಪೋಷಕ ಕೆ.ಆರ್. ಕಾಂತರಾಜು, ಚಿಕ್ಕಮರಿಗೌಡ ಆಗಮಿಸಿದ್ದರು. ಅಂಗವಾಗಿ ವಾಹಿನಿ ಕಲಾವಿದೆ ಅಭಿನೇತ್ರಿ ಜಯಶ್ರೀ, ಹಿರಿಯ ರಂಗಕಲಾವಿದ, ಪ್ರಸಾಧನ ತಜ್ಞ ಆಲೆಮನೆ ಸುಂದರಮೂರ್ತಿ ಅವರನ್ನು ಸನ್ಮಾನಿಸಲಾಯಿತು. ರಂಗಕಲಾ ನಿರ್ದೇಶಕ ಜಗದೀಶ್ವರಾಚಾರ್ಯ ಸ್ವಾಗತಿಸಿದರು. ದೇವರಾಜೇಅರಸ್ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಮುರಡಿ ಗಿರೀಶ್‌ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement