ಪ್ರೊ. ನಂಜುಂಡಸ್ವಾಮಿ ಮಹಾನ್ ವ್ಯಕ್ತಿ
ಕನಕಪುರ: ರಾಜ್ಯದ ರೈತರ ದನಿಯಾಗಿದ್ದ ಪ್ರೊ. ನಂಜುಂಡಸ್ವಾಮಿಯವರು ಅನ್ಯಾಯ, ಶೋಷಣೆಗಳ ವಿರುದ್ಧ ಹೋರಾಟ ಸತ್ಯಾಗ್ರಹಗಳ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಮಹಾನ್ ವ್ಯಕ್ತಿಯಾಗಿದ್ದರು ಎಂದು ಜಯಕರ್ನಾಟಕ ಸಂಘಟನೆ ಮಾಜಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ. ಅವರು ಕನಕಪುರದ ರೈತಸಂಘದ ಕಾರ್ಯಾಲಯದಲ್ಲಿ ಪ್ರೊ.ನಂಜುಂಡಸ್ವಾಮಿ 78ನೇ ಜನ್ಮದಿನಾಚರಣೆ ಹಾಗೂ 10ನೇ ಸಂಸ್ಮರಣ ದಿನವನ್ನು ನೆರವೇರಿಸಿ ಮಾತನಾಡುತ್ತಿದ್ದರು. ಸರ್ಕಾರದ ವೈಫಲ್ಯವನ್ನು ಎತ್ತಿತೋರಿಸುವ ಮೂಲಕ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿ, ವ್ಯವಸ್ಥೆ ಹಾಗೂ ಆಡಳಿತಗಳು ರೈತರು ಹಾಗೂ ಜನರಿಗಾಗಿ ಇರುವುದು ಎಂಬುದನ್ನು ತೋರಿಸಿಕೊಟ್ಟವರು ಪ್ರೊ. ನಂಜುಂಡಸ್ವಾಮಿ. ಅವರ ಬದುಕು, ಹೋರಾಟ, ಸಾಧನೆ, ತತ್ವಸಿದ್ಧಾಂತಗಳು ಇಂದಿಗೂ ರಾಜ್ಯದ ರೈತರ ಪಾಲಿನ ಭಗವದ್ಗೀತೆಯಾಗಿದೆ ಎಂದು ಕುಮಾರಸ್ವಾಮಿ ನುಡಿದರು.
ರೈತಮುಖಂಡರಾದ ಸಂಪತ್, ಆನಮಾನಹಳ್ಳಿ ನಾಗರಾಜು, ಅನಂತರಾಮಪ್ರಸಾದ್, ಮಂಜುನಾಥ್, ಶ್ರೀನಿವಾಸ್, ಮಾರಮ್ಮ, ಶಿವರುದ್ರಮ್ಮ ಪಾಲ್ಗೊಂಡಿದ್ದರು.