ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಹಿಳಾ ಸಬಲೀಕರಣಕ್ಕೆ ಹೆಚ್ಚು ಹಣ ಮೀಸಲಿಡಿ

Vishwanath S
Updated On : 14 Feb 2014, 11:34 am

ಮಾಗಡಿ: ಮಹಿಳಾ ಸಬಲೀಕರಣಕ್ಕೆ ಹೆಚ್ಚು ಹಣವನ್ನು ಮೀಸಲಿಟ್ಟು, ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಾಯಧನ, ಮಹಿಳೆಯರಿಗೆ ತಾಂತ್ರಿಕ ತರಬೇತಿ ನೀಡುವಂತೆ ಪುರಸಭಾ ಮಾಜಿ ಅಧ್ಯಕ್ಷೆ ಕಲ್ಪನಾಶಿವಣ್ಣ ಸಲಹೆ ನೀಡಿದರು.
ಅವರು ಮಾಗಡಿ ಪುರಸಭೆಯಲ್ಲಿ ಏರ್ಪಡಿಸಿದ್ದ 2014ರ  ಪುರಸಭೆ ಬಜೆಟ್    ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಸರ್ಕಾರ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ನೀಡಿದ್ದು, ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು. ಪಟ್ಟಣದ ಮಕ್ಕಳಿಗೆ ಕ್ರೀಡೆಗೆ ಹೆಚ್ಚು ಉತ್ತೇಜನವಿಲ್ಲ, ಶಾಲಾ ಮಕ್ಕಳನ್ನು ಕ್ರೀಡೆಗೆ ಹೆಚ್ಚು ಪ್ರೋತ್ಸಾಹಿಸಲು ಸರ್ಕಾರಿ ಶಾಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಉತ್ತಮ ಕ್ರೀಡಾಂಗಣ ನಿರ್ಮಿಸಲು ಹಣ ಮೀಸಲಿಟ್ಟು, ಕ್ರೀಡಾಂಗಣ ನಿರ್ಮಾಣಕ್ಕೆ ಉತ್ತಮ  ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಿದೆ. ಜತಗೆ ಜಿಲ್ಲಾ ಮತ್ತು ರಾಜ್ಯ ಮಟ್ಟಕ್ಕೆ ಹೋಗುವ ಕ್ರೀಡಾಪಟುಗಳಿಗೆ ಸಮವಸ್ತ್ರ, ಕ್ರೀಡಾ ಸಾಮಗ್ರಿಗಳನ್ನು ಒದಗಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಪಿ.ವಿ.ಸೀತಾರಾಂ ಮಾತನಾಡಿ ಪಟ್ಟಣದಲ್ಲಿ 23 ವಾರ್ಡ್‌ಗಳಿವೆ. ಕುಡಿಯುವ ನೀರಿಗಾಗಿ ಹೆಚ್ಚುವರಿ 2 ಲಕ್ಷ ರು.  ಹಣ ಮೀಸಲಿಡಬೇಕು. ದಿನೇ ದಿನೇ ಪಟ್ಟಣ ವಿಸ್ತರಾಗೊಳ್ಳುತ್ತಿದ್ದು, ಕಸದ ರಾಶಿ ಹೆಚ್ಚಾಗುತ್ತಿದೆ. ತ್ಯಾಜಗಳ ವಿಲೇವಾರಿಗೆ ಪುರಸಭೆಯಲ್ಲಿರುವ 2 ಟ್ರ್ಯಾಕ್ಟರ್‌ಗಳು, 2 ಕಸ ವಿಲೇವಾರಿ ಗಾಡಿ ಸಾಕಾಗುವುದಿಲ್ಲ, ಹೆಚ್ಚುವರಿಯಾಗಿ 1 ಟ್ರಾಕ್ಟರ್ ಮತ್ತು 2 ಸಾಕಾಣಿಕೆ ಗಾಡಿ ಖರೀದಿಸಲು ಬಜೆಟ್‌ನಲ್ಲಿ ಹಣ ಮೀಸಲಿಡಬೇಕಿದ್ದು, ಎಸ್‌ಸಿ, ಎಸ್ಟಿ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್ ಟ್ಯಾಪ್ ನೀಡಲಾಗುತ್ತಿದ್ದು, ಬಿಸಿಎಂ ಕಾಲೇಜು ವಿದ್ಯಾರ್ಥಿಗಳಿಗೂ ಲ್ಯಾಪ್ ಟ್ಯಾಪ್ ನೀಡಲು ಕ್ರಮ ವಹಿಸುವಂತೆ ತಿಳಿಸಿದರಲ್ಲದೆ ಪೂರ್ವಭಾವಿ ಸಭೆಯಲ್ಲಿ ಚರ್ಚೆಯಾಗುವ ವಿಷಯಗಳು ದಾಖಲಿಸುವಂತೆ ಮನವಿ ಮಾಡಿದರು. ಈ ಬಾರಿ ಕಾಟಾಚಾರದ ಬಜೆಟ್ ಮಂಡನೆಯಾಗಬಾರದು, ಉತ್ತಮ ಯೋಜನೆಗಳನ್ನು ರೂಪಿಸುವಂತಹ ಬಜೆಟ್ ಮಂಡನೆಯಾಗಲಿ ಎಂದರು.
ಕುಡಿಯುವ ನೀರಿಗಾಗಿ ಹಣ ಮೀಸಲಿಡುವುದರ ಜತೆಗೆ ಪೈಪ್‌ಲೈನ್ ವಿಸ್ತರಣೆಗೂ ಹಣ ಮೀಸಲಿಡಬೇಕಿದೆ ಎಂದು ಪುರಸಭಾ ಸದಸ್ಯ ಎಂ.ಎನ್. ಮಂಜುನಾಥ್ ತಿಳಿಸಿದರು.  
ಉತ್ತಮ ಬಜೆಟ್ ಮಂಡನೆಗೆ ಸಕಲ ಸಿದ್ಧತೆಯೊಂದಿಗೆ ಸಜ್ಜಾಗುವುದಾಗಿ ಪುರಸಭೆ ಮುಖ್ಯಾಧಿಕಾರಿ ಕೆ.ಕೆ. ಮುತ್ತಪ್ಪ ತಿಳಿಸಿದರು.
  ಪುರಸಭಾ ಸದಸ್ಯರಾದ ಎಸ್. ಮಹದೇವ್, ಎಂ.ಬಿ. ಮಹೇಶ್, ಶಿವಕುಮಾರ್, ಜಯಲಕ್ಷಮ್ಮ ರೇವಣ್ಣ, ಶಿವರುದ್ರಮ್ಮ ವಿಜಯಕುಮಾರ್, ಮಾಜಿ ಅಧ್ಯಕ್ಷರಾದ ರಂಗಹನುಮಯ್ಯ,ನರಸಿಂಹಯ್ಯ (ಡಿಂಗ್ರಿ), ನಮಹಮದ್ ಇನಾಯಿತ್  ಉಲ್ಲಾ, ನವಾಬ್, ನಯಾಜ್, ಇಲಿಯಾಜ್, ಪುರಸಭೆ ಆರ್.ಓ ಗುರುನಾಥ್,
ಕಂದಾಯಾಧಿಕಾರಿಗಳಾದ ನಂದೀಶ್, ಮುನಿಯಪ್ಪ, ಎಂಜಿನಿಯರ್ ಸುಮತಿ, ಲೆಕ್ಕಾಧಿಕಾರಿ ನಾಗೇಂದ್ರ, ನರಸಿಂಹಮೂರ್ತಿ, ಆರೋಗ್ಯಾಧಿಕಾರಿ  ಕುಸುಮ,ಮೋಹನ್, ನಾಗಭೂಷಣ್, ಸಿಬ್ಬಂದಿಗಳಾದ ರಾಜಣ್ಣ, ರಾಮಕೃಷ್ಣ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement