ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷರಾಗಿ ಎ.ವಿ. ನಾಗರಾಜ್ ಅವಿರೋಧ ಆಯ್ಕೆ
ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾಗಿ ಆವತಿಯ ಎ.ಸಿ.ನಾಗರಾಜ್ ಮತ್ತು ಉಪಾಧ್ಯಕ್ಷರಾಗಿ ನೆಲಮಂಗಲ ಎನ್.ಎಚ್. ಜಯದೇವಯ್ಯ ಅವರನ್ನು ಒಕ್ಕೂಟದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿ ಇವರ ಅಧಿಕಾರಾವಧಿ ಮಾರ್ಚ್ 15, 2015ರವರೆಗೆ ಇರುತ್ತದೆ ಎಂದು ತಿಳಿಸಿದ್ದಾರೆ.
ಜಿಪಂ ಮಾಜಿ ಅಧ್ಯಕ್ಷ ಬಿ.ಮುನೇಗೌಡ, ಬಿಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ದೇವರಾಜ್, ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ಬಿ.ಶ್ರೀನಿವಾಸ್ ಹಾಗೂ ಜೆಡಿಎಸ್ ಮುಖಂಡ ಸುಬ್ಬೇಗೌಡ ಅಭಿನಂದಿಸಿದ್ದಾರೆ.
ಗೀತಗಾಯನ ಕಾರ್ಯಕ್ರಮ
ಕನಕಪುರ: ಕನಕಪುರದ ರೋಟರಿ ಭವನದಲ್ಲಿ ಪರಿವರ್ತನ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಾನಪದ ಜಾಗೃತಿ ಹಾಗೂ ಗೀತಗಾಯನ ಕಾರ್ಯಕ್ರಮ ನಡೆಯಿತು. ಹಾರೋಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಮಹಿಳಾ ಸ್ವಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ಸಿ.ವಿ.ಪ್ರಕಾಶ್ ತಮಟೆ ಬಾರಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು. ಬಿಎಸ್ಪಿ ಜಿಲ್ಲಾಧ್ಯಕ್ಷ ಅಂದಾನಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ವಿವಿಧ ತಂಡಗಳಿಂದ ಜಾನಪದ ಗೀತೆ, ಸೋಬಾನೆ ಪದಗಳು, ಗೀಗೀ ಪದಗಳು, ಲಾವಣಿ ಮೊದಲಾದವುಗಳ ಗಾಯನ ನಡೆಯಿತು. ದಲಿತ ಮುಖಂಡರುಗಳಾದ ಮಲ್ಲಿಕಾರ್ಜುನ, ನೀಲಿ ರಮೇಶ್, ಚಂದ್ರಾಜ, ವೆಂಕಟಾಚಲ, ಟಿ.ಗೋಪಿ, ರಂಜಿತಾ, ಚಂದ್ರು, ಶಿವಮುತ್ತು ಪಾಲ್ಗೊಂಡಿದ್ದರು.