ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾಹುಲ್ರಿಂದ ಶುದ್ಧ ಕುಡಿವ ನೀರು ಘಟಕ ಉದ್ಘಾಟನೆ

Rashmi Kasaragodu
Updated On : 18 Feb 2014, 2:40 am

ಕನಕಪುರ: ಡಿಕೆಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೆಂಗ್ರಾ ಲೋಕಸಭಾ ಕ್ಷೇತ್ರದ ಹುಲಿಯೂರುದುರ್ಗ ಹಾಗೂ ಮಾವತ್ತೂರು ಗ್ರಾಮಗಳಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವನೀರು ಘಟಕದ ಉದ್ಘಾಟನೆಯನ್ನು ರಾಹುಲ್ಗಾಂಧಿ ನೆರವೇರಿಸಿದರು.
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಇಂಧನಸಚಿವ ಡಿ.ಕೆ.ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್, ಮುಖಂಡರುಗಳಾದ ಎಸ್.ರವಿ, ಎ. ಮಂಜು, ರಘುನಂದನರಾಮಣ್ಣ, ವಿಜಯದೇವ್ ಪಾಲ್ಗೊಂಡಿದ್ದರು.
ರಾಹುಲ್ಗಾಂಧಿಯವರು ಮಾತನಾಡಿ, ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಬೆಂಗ್ರಾ ಲೋಕಸಭಾ ಕ್ಷೇತ್ರ ದಲ್ಲಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಶುದ್ಧ ಕುಡಿಯುವ ನೀರಿನ ಸ್ಥಾವರಗಳನ್ನು ಪ್ರಾರಂಭಿಸಿ ಪ್ರಶಂಸಾರ್ಹ ಕಾರ್ಯ ನಡೆಸಿದೆ. ಕೇಂದ್ರ ಸರ್ಕಾರವೂ ಕೂಡಾ ಪ್ರಸಕ್ತ ಸಾಲಿನಿಂದಲೇ ದೇಶದಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ ಎಂದು ಹೇಳಿದರು.
ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ ಈಗಾಗಲೇ ಕನಕಪುರ ಕ್ಷೇತ್ರದಾದ್ಯಂತ ಐವತ್ತಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯಾರಂಭ ಮಾಡಿವೆ, ಪ್ರಸಕ್ತ ಸಾಲಿನಲ್ಲಿಯೇ ಬೆಂಗ್ರಾ ಲೋಕಸಭಾ ವ್ಯಾಪ್ತಿಯಲ್ಲಿ ಒಂದುನೂರಕ್ಕೂ ಹೆಚ್ಚಿನ ಘಟಕಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಸಂಸದ ಸುರೇಶ್
ಈ ಯೋಜನೆಯ ನೇತೃತ್ವ ವಹಿಸಿದ್ದಾರೆ ಎಂದು ಹೇಳಿದರು.
ರಾಹುಲ್ಗಾಂಧಿಯವರನ್ನು ಸ್ವಾಗತಿಸಲು ಕನಕಪುರದಿಂದ ಐದುನೂರಕ್ಕೂ ಹೆಚ್ಚುಮಂದಿ ಯುವಕಾಂಗ್ರೆಸ್ ಕಾರ್ಯಕರ್ತರು ಬೈಕ್ರ್ಯಾಲಿ ಮೂಲಕ ಕುಣಿಗಲ್ಗೆ ತೆರಳಿ ಅಲ್ಲಿಂದ ರಾಜೀವ್ಗಾಂಧಿ ಜೊತೆಗೆ ಮೈಸೂರಿನವರೆಗೆ ಬೈಕ್ರ್ಯಾಲಿ ನಡೆಸಿದ್ದು ವಿಶೇಷವಾಗಿ ಗಮನ ಸೆಳೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement