ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ದಾಟಲ್ಲ

Rashmi Kasaragodu
Updated On : 18 Feb 2014, 2:41 am

ದೇವನಹಳ್ಳಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಎರಡಂಕಿ ದಾಟೊಲ್ಲ ಎಂದು ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಭವನೀಯ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ದೇವನಹಳ್ಳಿ ತಾಲೂಕು ಭಾರತೀಯ ಜನತಾ ಪಕ್ಷ ಕಚೇರಿಯನ್ನು ಉದ್ಘಾಟಿಸಿದ ಬಚ್ಚೇಗೌಡ ಇಡೀ ದೇಶದಲ್ಲಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅಲೆ ಎದ್ದಿದೆ.  ಬಿಜೆಪಿ  ಲೋಕಸಭೆಯಲ್ಲಿ 272 ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ಅದರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರವೂ ಸೇರಿದೆ ಎಂದರಲ್ಲದೆ ಕಳೆದ ವರ್ಷ ಸೆ.13 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥಸಿಂಗ್ ಅವರು ಮೋದಿ ಮುಂದಿನ ಪ್ರಧಾನಿ ಎಂದು ಘೋಷಣೆ ಮಾಡಿದ ನಂತರ ಕಾಂಗ್ರೆಸ್  ಮುಖಂಡರಿಗೆ ಕಂಪನ ಶುರುವಾಗಿದೆ. ಮೋದಿಯವರು ದೇಶಾದ್ಯಂತ ಭಾರಿ ಸಭೆಗಳನ್ನು ಮತ್ತು ರ್ಯಾಲಿ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ರೋಡ್ ಶೋ ಮಾಡಿದಾಕ್ಷಣ ಮತದಾರರು  ಮತ ನೀಡುವುದಿಲ್ಲ. ದೇಶದ ಚಿಂತನೆ, ರಾಜಕೀಯ ಅನುಭವ ಮತ್ತು ಅರ್ಹತೆ ಇಲ್ಲದ ರಾಹುಲ್ ಗಾಂಧಿ ಪ್ರಧಾನಿಯಾಗಲು ಸಾಧ್ಯವೇ ಇಲ್ಲ ಎಂದರಲ್ಲದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಾಗಬೇಕು ಎಂದು ಬಚ್ಚೇಗೌಡ ತಿಳಿಸಿದರು.
ಇದೇ ಸಂಧರ್ಭದಲ್ಲಿ ಮಾಜಿ ಶಾಸಕ ಜಿ. ಚಂದ್ರಣ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ನಾಗೇಶ್ ಮಾತನಾಡಿ ಹೊಸಕೋಟೆ ಮತ್ತು ದೇವನಹಳ್ಳಿ ತಾಲೂಕುಗಳು ಬೇರೆಯಲ್ಲ. ಬಚ್ಚೇಗೌಡರನ್ನು ಗೆಲ್ಲಿಸಿದರೆ ದೇವನಹಳ್ಳಿ
ತಾಲೂಕಿನವರೇ ಆಗಿರುತ್ತಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಸ್ವಭಾವ ಅವರದು ಎಂದರು.
  ತಾಲೂಕು ಬಿಜೆಪಿ ಕಾರ್ಯದರ್ಶಿ ನಾರಾಯಣಸ್ವಾಮಿ ಸ್ವಾಗತ ಕೋರಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಾಂತರಾಜ್, ಹೊಸಕೋಟೆ ತಾಲೂಕಿನ ಬಿಜೆಪಿ ಮುಖಂಡರಾದ ಬಿ.ಎನ್.ಗೋಪಾಲಗೌಡ, ಹೊಸಕೋಟೆ ತಾಲೂಕು ಬಿಜೆಪಿ ಅಧ್ಯಕ್ಷ ಸಿ.ಮುನಿಯಪ್ಪ, ದೇವನಹಳ್ಳಿ ತಾಲೂಕು ಬಿಜೆಪಿ ಅಧ್ಯಕ್ಷ ರಾಜಗೋಪಾಲ್, ಎ.ಸಿ.ಗುರುಸ್ವಾಮಿ, ದೇ.ಸೂ.ನಾಗರಾಜ್, ಹುರುಳುಗುರ್ಕಿ ಶ್ರೀನಿವಾಸ್, ಎಸ್. ರಮೇಶ್ಕುಮಾರ್ ಉಪಸ್ಥತಿರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement