ಅಂಗಡಿಯಲ್ಲಿ ಅಕ್ರಮ ಮಾರಾಟಕ್ಕಿಟ್ಟಿದ್ದ ಗುಟ್ಕಾ ವಶ
ದೇವನಹಳ್ಳಿ: ದೇವನಹಳ್ಳಿ ಮತ್ತು ವಿಜಯಪುರ ಪಟ್ಟಣಗಳಲ್ಲಿನ ಬೀಡ ಅಂಗಡಿಗಳು ಅಲ್ಲದೆ ಸಗಟು ಮಳಿಗೆಗಳಲ್ಲಿ ಅಕ್ರಮವಾಗಿ ಗುಟ್ಕ ಪೊಟ್ಟಣಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ.ಖಾಲಿದ್ ಅಹಮದ್ ಅವರ ನೇತೃತ್ವದಲ್ಲಿ ಮಂಗಳವಾರ ದಾಳಿ ನಡೆಸಿ ಸುಮಾರು ಎರಡು ಕೆಜಿಗೂ ಹೆಚ್ಚು ಗುಟ್ಕ ಶೀಟ್ಗಳನ್ನು ವಶಪಡಿಸಿಕೊಂಡು ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ. ಈ ಸಂಧರ್ಭದಲ್ಲಿ ಹಿರಿಯ ಜಿಲ್ಲಾ ಆರೋಗ್ಯ ನಿರೀಕ್ಷಕ ಅಧಿಕಾರಿಗಳಾದ ರವೀಂದ್ರ ಕಾರಂತ್, ಎ.ಎಂ. ಮಂಜುನಾಥ್, ನಾಗರಾಜ್ ಭಾಗವಹಿಸಿದ್ದರು.