ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತಿಗಳ ಸಂಘದ ನಿರ್ದೇಶಕ ಚಂದ್ರಪ್ಪಗೆ ಸನ್ಮಾನ

Rashmi Kasaragodu
Updated On : 19 Feb 2014, 2:06 am

ದೇವನಹಳ್ಳಿ: ಕರ್ನಾಟಕ ರಾಜ್ಯ ವಹ್ನಿಕುಲ ಕ್ಷತ್ರೀಯ ತಿಗಳ ಸಂಘದ ನಿದೇಶಕರುಗಳ 25 ಸ್ಥಾನಗಳಿಗೆ ಇತ್ತೀಚೆಗ ಚುನಾವಣೆ ನಡೆದು ದೇವನಹಳ್ಳಿಯ ಎಸ್.ಸಿ. ಚಂದ್ರಪ್ಪ ಹಾಗೂ ವಿಜಯಪುರದ ರಾಮಚಂದ್ರಪ್ಪ ಚುನಾಯಿತರಾಗಿದ್ದಾರೆ.   ಎಸ್.ಸಿ.ಚಂದ್ರಪ್ಪ ಅವರಿಗೆ ಸನ್ಮಾನ ಸಮಾರಂಭ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದರು.   ಮಾಜಿ ಶಾಸಕ ವೆಂಕಟಸ್ವಾಮಿ ನೂತನ ನಿರ್ದೇಶಕ ಚಂದ್ರಪ್ಪ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರಲ್ಲದೆ ಯಾವುದೇ ವ್ಯಕ್ತಿಗೆ ಸ್ಥಾನಮಾನ ಸಿಗಬಹುದು. ಆದರೆ ಅವನ ಅಧಿಕಾರಾವಧಿಯಲ್ಲಿ ಜನತೆಗೆ ಹೇಗೆ ಸ್ಪಂದಿಸುತ್ತಾನೆ ಎಂಬುದು ಮುಖ್ಯವಾಗಿರುತ್ತದೆ ಎಂದು ತಿಳಿಸಿ ಚಂದ್ರಪ್ಪ ತಿಗಳ ಜನಾಂಗದ ಅಭಿವೃದ್ಧಿಗೆ ಶ್ರಮಿಸಲಿ ಎಂದರು.   ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್, ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಿ.ವೇಣುಗೋಪಾಲ್, ತಿಗಳರ ಸಂಘದ ಅಧ್ಯಕ್ಷ ವಿ.ಗೋಪಾಲಕೃಷ್ಣ, ಮೌಕ್ತಿಕಾಂಬ ದೇವಾಲಯ ಸಮಿತಿ ಅಧ್ಯಕ್ಷ ವಿಜಯಕುಮಾರ್, ಪುರಸಭಾ ಸದಸ್ಯ ಶಶಿಕುಮಾರ್, ವಿಜಯಪುರ ಪುರಸಭಾ ಮಾಜಿ ಸದಸ್ಯ ಚಂದ್ರಶೇಖರ್ ಉಪಸ್ಥಿತರಿದ್ದರು.    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement