ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರೈತರಿಬ್ಬರ ಮೇಲೆ ಕರಡಿ ದಾಳಿ: ತೀವ್ರ ಗಾಯ

Rashmi Kasaragodu
Updated On : 19 Feb 2014, 2:05 am

ರಾಮನಗರ: ತೋಟ ಕಾಯಲು ತೆರಳಿದ್ದ ರೈತರಿಬ್ಬರ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಎಸ್‌ಆರ್‌ಎಸ್ ಬೆಟ್ಟದ ಬಳಿಯ ಅಮ್ಮನಪುರ ದೊಡ್ಡಿಯಲ್ಲಿ ನಡೆದಿದೆ.
ಅಮ್ಮನಪುರದೊಡ್ಡಿಯ ವಾಸಿಗಳಾದ ವಿನೂ ನಾಯಕ ಮತ್ತು ಸ್ವಾಮಿ ನಾಯಕ ಕರಡಿ ದಾಳಿಗೊಳಗಾದವರು. ಈ ಭಾಗದಲ್ಲಿ ಆನೆಗಳ ಕಾಟ ಹೆಚ್ಚಾಗಿದೆ. ಮಾವಿನ ತೋಟಗಳಿಗೆ ದಾಳಿ ಇಟ್ಟು, ಅಪಾರ ಪ್ರಮಾಣದ ನಷ್ಟ ಉಂಟು ಮಾಡುತ್ತಿದ್ದು, ಆನೆಗಳನ್ನು ಕಾಯಲು ತೆರಳಿದ್ದ ಇವರ ಮೇಲೆ ಕರಡಿ ಹಠಾತ್ ದಾಳಿ ನಡೆಸಿದೆ.
ಕರಡಿ ನಡೆಸಿದ ದಾಳಿಯಿಂದ ವಿನೂ ನಾಯಕನಿಗೆ ಮುಖ, ಕಣ್ಣು, ಕೈ ಕಾಲುಗಳನ್ನು ಕಚ್ಚಿ, ತೀವ್ರವಾಗಿ ಗಾಯವಾಗಿದೆ. ಇವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈತನ ರಕ್ಷಣೆಗೆ ಧಾವಿಸಿದ ಸ್ವಾಮಿ ನಾಯಕನ ಮೇಲೂ ಕರಡಿಯು ಹಲ್ಲೆ ನಡೆಸಿದೆ. ಇವರಿಗೆ ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕರಡಿ ದಾಳಿಯಿಂದ ತೀವ್ರ ಗಾಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಗಾಯಾಳುವಿನ ಚಿಕಿತ್ಸೆಗಾಗಿ ರು.5 ಸಾವಿರ ಸಹಾಯ ಧನ ನೀಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement