ಸಾಹಿತಿ ಕೂ.ಗಿ. ಗಿರಿಯಪ್ಪ ಅಭಿನಂದನಾ ಸಮಿತಿ ಸಭೆ
ಕನಕಪುರ: ಕನಕಪುರದ ಎಕ್ಸ್ಮುನಿಸಿಪಲ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಾಹಿತಿ ಕೂ.ಗಿ. ಗಿರಿಯಪ್ಪ ಅಭಿನಂದನಾ ಸಮಿತಿ ಸಭೆ ತಾಲೂಕು ಕಸಾಪ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ವಿ. ನಾರಾಯಣ, ವೃತ್ತಿಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಆರ್. ಮುನಿಯಪ್ಪ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ್, ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ವೃಷಭೇಂದ್ರ ಮೂರ್ತಿ, ಮುಖ್ಯಶಿಕ್ಷಕಿ ಸ್ವರೂಪಾಬಾಲಕೃಷ್ಣ, ಎಂ.ಸಿ.ನಾಗರಾಜು, ತಿಪ್ಪೇಸ್ವಾಮಿ ಪಾಲ್ಗೊಂಡಿದ್ದರು. ಚಿದಾನಂದ ಪಾಟೀಲ್ ಮಾತನಾಡಿ, ಸರಳ ಮೃದು ಕವಿಮನಸ್ಸಿನ ಕೂ.ಗಿ. ಗಿರಿಯಪ್ಪನವರು ಇದೇ ತಿಂಗಳು ನಿವೃತ್ತಿ ಹೊಂದುತ್ತಿದ್ದು ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ, ರಾಷ್ಟ್ರಪ್ರಶಸ್ತಿ ವಿಜೇತರಾಗಿರುವ ಸಾಹಿತಿಗಳಾಗಿದ್ದು 40ಕ್ಕೂ ಹೆಚ್ಚು ಮೌಲ್ವಿಕವಾದ ಕೃತಿಗಳನ್ನು ರಚಿಸಿದ್ದಾರೆ ಎಂದರು. ಕೂ.ಗಿ. ಗಿರಿಯಪ್ಪನವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿ ಮಾಜಿ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ಚಿಕ್ಕಪುಟ್ಟೇಗೌಡ ಸಂಪಾದಕತ್ವದಲ್ಲಿ ಅಭಿನಂದನಾಗ್ರಂಥ ಸಮರ್ಪಿಸಲು ಸಮಿತಿಯು ತೀರ್ಮಾನಿಸಿತು. ಆಸಕ್ತ ಲೇಖಕರು ಸಂಬಂಧಿತ ಲೇಖನಗಳನ್ನು ಫೆ.25 ರೊಳಗಾಗಿ ಎಂ.ಆರ್. ಮುನಿಯಪ್ಪ, ಎಕ್ಸ್ಮುನಿಸಿಪಲ್ ಸರ್ಕಾರಿ ಪ್ರೌಢಶಾಲೆ, ಕನಕಪುರ, ಮಿಂಚಂಚೆ ಝಛ್ಝಜಛಠಛಡ್ಝಿಟಣ್ಜಟಛ್ಝಟ.್ಛ್ಟಟ.,ಗೆ ಕಳುಹಿಸಲು ಕೋರಲಾಗಿದೆ.