ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ
ಚನ್ನಪಟ್ಟಣ: ತಾಲೂಕಿನ ಕುಂತೂರು ದೊಡ್ಡಿಗ್ರಾಮದ ಯಂಗ್ಸ್ಟಾರ್ ಕ್ರಿಕೆಟರ್ಸ್ ವತಿಯಿಂದ ದಿ.ಕೆಂಗಲ್ ಮೂರ್ತಿ ಸ್ಮರಣಾರ್ಥ 10 ನೇ ವರ್ಷದ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಫೆ.27 ರಿಂದ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಪಂದ್ಯಾವಳಿಯ ಆಯೋಜಕ ಕೇಶವ್ ಮೂರ್ತಿ ತಿಳಿಸಿದ್ದಾರೆ.
ಪಂದ್ಯಾವಳಿಯಲ್ಲಿ ವಿಜೇತಗೊಂಡ ತಂಡಗಳಿಗೆ ಪ್ರಥಮ ಬಹುಮಾನ 10ಸಾವಿರ ಮತ್ತು ಆಕರ್ಷಕ ಪಾರಿತೋಷಕ, ದ್ವಿತೀಯ ಬಹುಮಾನವಾಗಿ 5 ಸಾವಿರ ಮತ್ತು ಪಾರಿತೋಷಕವನ್ನು ನೀಡಲಾಗುವುದು. ಆಸಕ್ತಿಯುಳ್ಳ ತಂಡಗಳು ಫೆ.25 ರೊಳಗೆ ತಮ್ಮ ಹೆಸರನ್ನು 9538847348, 8884386156 ದೂರವಾಣಿ ಮೂಲಕ ನೋಂದಾಯಿಸಿ ಕೊಳ್ಳಬಹುದಾಗಿದೆ. ಪ್ರತಿ ತಂಡಕ್ಕೆ 500 ರೂ. ನೋಂದಣಿ ಶುಲ್ಕ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.