ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಂತರ ರಾಜ್ಯ ಸಾಂಸ್ಕೃತಿಕ ಉತ್ಸವ

Rashmi Kasaragodu
Updated On : 21 Feb 2014, 1:45 am

ರಾಮನಗರ: ಶಾಂತಲಾ ಚಾರಿಟಬಲ್ ಟ್ರಸ್ಟ್, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಂತರ ರಾಜ್ಯ ಸಾಂಸ್ಕೃತಿಕ ಉತ್ಸವವು ಫೆ.22 ಮತ್ತು 23ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.  ಕಾರ್ಯಕ್ರಮವನ್ನು ಫೆ.22ರ ಬೆಳಗ್ಗೆ 11ಕ್ಕೆ ಸಂಸದ ಡಿ.ಕೆ.ಸುರೇಶ್ ಉದ್ಘಾಟಿಸುವರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮರಿದೇವರು ಅಧ್ಯಕ್ಷತೆ ವಹಿಸುವರು. ಉತ್ಸವಾಧ್ಯಕ್ಷ ಡಾ.ಕಾಳೇಗೌಡ ನಾಗವಾರ, ಗುರು ಡಾ.ಶ್ಯಾಮಲ ಜಿ.ಭಾವೆ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ಕಾರ್ಯದರ್ಶಿ ಸಿದ್ರಾಮಪ್ಪ ತಳವಾರ್ ಭಾಗವಹಿಸುವರು. 2 ದಿನ ನಡೆಯುವ ಉತ್ಸವದಲ್ಲಿ ಒಡಿಸ್ಸಿ, ಬಂಗಾಲಿ, ಕೇರಳ, ಪಂಜಾಬಿ, ಗೋವಾ ನೃತ್ಯ, ಪೂಜಾ ಕುಣಿತ, ವೀರಗಾಸೆ ಪಂಡರಿ ಭಜನೆ, ಡೊಳ್ಳು ಕುಣಿತ, ಪಟ್ಟದ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ಪ್ರದರ್ಶನ, ವಿಚಾರಗೋಷ್ಠಿ, ಕವಿ ಗೋಷ್ಠಿ ನಡೆಯಲಿವೆ. ರಂಗಭೂಮಿ ನಿರ್ದೇಶಕ ಮಾಲತೇಶ್ ಬಡಿಗೇರ್, ಸಂಗೀತ ಕ್ಷೇತ್ರದಲ್ಲಿ ಹೆಸರುವಾಸಿಯಾದ ವಾಗೇಶ್ ಭಟ್, ಭರತ ನಾಟ್ಯ ಕಲಾವಿದ ಪಿ. ಪ್ರವೀಣ್‌ಕುಮಾರ್ ಅವರಿಗೆ ಶಾಂತಲಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಟ್ರಸ್ಟ್‌ನ ಅಧ್ಯಕ್ಷೆ ಕವಿತಾ ರಾವ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement