ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಒಂದು ದಿನದ ಕಾರ್ಯಾಗಾರ

Rashmi Kasaragodu
Updated On : 21 Feb 2014, 1:43 am

ಕನಕಪುರ: ಜಿಲ್ಲಾ ಪಂಚಾಯತ್, ಸಾಂಖ್ಯಿಕ ಇಲಾಖೆ ವತಿಯಿಂದ ಕನಕಪುರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸಹಾಯಕರಿಗೆ ಒಂದುದಿನದ ಕಾರ್ಯಾಗಾರ ನಡೆಯಿತು.  ಬೆಳೆ ಅಂದಾಜು, ಫಸಲು ಸಮೀಕ್ಷೆ, ಅಂತರ್ಜಾಲ  ನೋಂದಣಿ ವಿಧಾನಗಳ ಬಗ್ಗೆ ವಿವರವಾದ ತರಬೇತಿಯನ್ನು ಜಿಲ್ಲಾಸಾಂಖ್ಯಿಕ ನಿರೀಕ್ಷಕ ದಿನೇಶ್, ಸಹಾಯಕ ನಿರ್ದೇಶಕ ರಾಜಣ್ಣ ಗೌಡ ನೀಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ.ಜೆ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ರೈತರು ಬೆಳೆಯುವ ಬೆಳೆಗಳ ಅಂದಾಜು ಸಂಗ್ರಹ ಅತ್ಯಂತ ಮಹತ್ವದ ವಿಷಯವಾಗಿದ್ದು, ಕೃಷಿ, ತೋಟಗಾರಿಕೆ, ಗ್ರಾಪಂ, ಕಂದಾಯ ಇಲಾಖೆ ಅಧಿಕಾರಿಗಳು ಫಸಲಿನ ವಿವರಗಳನ್ನು,ಉತ್ತಮ ಬೆಳೆ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿದರೆ, ಅನೇಕ ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸಲು ಹಾಗೂ ರೈತರಿಗೆ ಸವಲತ್ತುಗಳನ್ನು ಒದಗಿಸಲು ಅನುಕೂಲವಾಗುತ್ತದೆ. ಇಂದಿನ ಯುಗದಲ್ಲಿ ಮಾಹಿತಿ ಅಂತರ್ಜಾಲಕ್ಕೆ ಊಡಿಸುವುದು ಕೂಡಾ ಮಹತ್ವದ ವಿಷಯವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ.ಜೆ.ನಾಯಕ್ ನುಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement