ಕನಕಪುರ: ಹೊಲಿಗೆ ತರಬೇತಿ ಶಿಬಿರ
ಕನಕಪುರ: ಕನಕಪುರ ತಾಲೂಕು ಹಾರೋಹಳ್ಳಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಗ್ರಾಮೀಣ ಮಹಿಳಾ ಸ್ವಉದ್ಯೋಗ ತರಬೇತಿ ಕೇಂದ್ರದಲ್ಲಿ 18 ರಿಂದ 35 ವಯೋವುತಿಯ ಆಸಕ್ತ ನಿರುದ್ಯೋಗಿ ಮಹಿಳೆಯರಿಗಾಗಿ ಉಚಿತ ಮೊಬೈಲ್ ಫೋನ್ ಸರ್ವೀಸಿಂಗ್, ಆಹಾರ ಸಂಸ್ಕರಣೆ, ಗೃಹಬಳಕೆ ರಸಾಯನಿಕ ವಸ್ತುಗಳ ತಯಾರಿಕೆ, ಡ್ರಸ್ ಡಿಸೈನಿಂಗ್ ಹಾಗೂ ಹೊಲಿಗೆ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ. ಉಚಿತ ಊಟ, ವಸತಿ ಹಾಗೂ ತರಬೇತಿ ನಂತರ ತರಬೇತಿ ಪಡೆದ ಮಹಿಳೆಯರಿಗೆ ವೃತ್ತಿ ಮಾರ್ಗದರ್ಶನ, ಸಬಲೀಕರಣ ಕಾರ್ಯಕ್ರಮದಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತ ಮಹಿಳೆಯರು ಭರ್ತಿ ಮಾಡಿದ ಅರ್ಜಿಯನ್ನು ರವಾನಿಸಿ, ಫೆ.22 ರಂದು ಸಂಸ್ಥೆಗೆ ನೇರಸಂದರ್ಶನಕ್ಕೆ ಹಾಜರಾಗಲು ನಿರ್ದೇಶಕ ಸಿ.ವಿ.ಪ್ರಕಾಶ್ ಕೋರಿದ್ದಾರೆ. ಹೆಚ್ಚಿನ ವಿವರಗಳಿಗೆ ದೂರವಾಣಿ 080 275 62260, ಮೊಬೈಲ್- 9480600849, ಮಿಂಚುಂಚೆ - ್ಛಛಿಡಜಡ್ಝ್ಠಿ ಢಿಣ ್ಜಟಛ್ಝಟ. ್ಛ್ಟಟ., ಸಂಪರ್ಕಿಸಲು ಕೋರಿದೆ.
ಸಂಗೀತ ಸಂಜೆ ಕಾರ್ಯಕ್ರಮ
ರಾಮನಗರ: ಕನಕಪುರದ ಭಾರತ್ ಸಾಂಸ್ಕೃತಿಕ ಕಲಾ ಕೇಂದ್ರವು ಫೆ.22ರ ಸಂಜೆ 6ಕ್ಕೆ ತಾಲೂಕು ಕಚೇರಿ ಮುಂಭಾಗದಲ್ಲಿರುವ ನಾಡೋಜ ಡಾ.ರಾಜ್‌ಕುಮಾರ್ ಬಯಲು ರಂಗಮಂದಿರದಲ್ಲಿ ನಾದಸ್ವರ ವಾದಕ ದಿವಂಗತ ಕೆ.ವಿ. ಕೋದಂಡರಾಮು ಸ್ಮರಣಾರ್ಥ ಹಾಗೂ ಮುಂಗಾರು ಮುನ್ನುಡಿಗೆ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮವನ್ನು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಸ್.ರವಿ ಉದ್ಘಾಟಿಸುವರು.