ನಮೋ ಟೀ ಸ್ಟಾಲ್ ಉದ್ಘಾಟನೆ
ಕನಕಪುರ: ಭ್ರಷ್ಟರು ವಿದೇಶದಲ್ಲಿ ಸಂಗ್ರಹಿಸಿರುವ ಕಪ್ಪುಹಣವನ್ನು ಮರಳಿ ಭಾರತಕ್ಕೆ ತರುವುದು, ಭ್ರಷ್ಟಾಚಾರ ಮುಕ್ತ ದೇಶವನ್ನು ರೂಪಿಸುವುದು, ಗಂಗಾಕಾವೇರಿ ಯೋಜನೆಯನ್ನು ಜಾರಿಗೊಳಿಸಿ ದೇಶವನ್ನು ಸಸ್ಯಶ್ಯಾಮಲೆಯನ್ನಾಗಿ ಮಾಡುವುದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಕನಸಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ನಾಗರಾಜ್ ಹೇಳಿದ್ದಾರೆ. ಅವರು ಕನಕಪುರದ ತಾಲೂಕು ಕಚೇರಿ ಆವರಣದಲ್ಲಿ ಬಿಜೆಪಿ ಯುವಮೋರ್ಚಾ ಆಯೋಜಿಸಿದ್ದ ನರೇಂದ್ರಮೋದಿ (ನಮೋ) ಟೀಸ್ಟಾಲ್ ಉದ್ಘಾಟನೆಯನ್ನು ನರೆವೇರಿಸಿ ಮಾತನಾಡುತ್ತಿದ್ದರು. ತಾಲೂಕು ಬಿಜೆಪಿ ಅಧ್ಯಕ್ಷ ಜಗನ್ನಾಥ್, ಭೂಹಳ್ಳಿ ಶ್ರೀನಿವಾಸ್, ನಾಗಾನಂದ, ರವೀಂದ್ರಬಾಬು, ರಾಜು, ಪ್ರಶಾಂತ್, ಗುರುಪ್ರಸಾದ್ ಪಾಲ್ಗೊಂಡಿದ್ದರು.
ಶಿವನಾಂಕಾರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
ಕನಕಪುರ: ಕನಕಪುರದ ಹೆಸರಾಂತ ಸಂಗಮ ಮೇಕೇದಾಟು ಸಮೀಪದಲ್ಲಿರು ಹಿರೇಮಡಿವಾಳದ ಶ್ರೀ ಶಿವನಾಂಕಾರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಫೆ.26 ಹಾಗೂ ಫೆ.27 ರಂದು ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಎಳವಾರ ಹಾಗೂ ಅಗ್ನಿಕೊಂಡೋತ್ಸವಗಳು ನಡೆಯಲಿದ್ದು, ಧಾರ್ಮಿಕ ಸಭೆಯಲ್ಲಿ ಅನೇಕ ಸ್ವಾಮೀಜಿಗಳು ಪಾಲ್ಗೊಂಡು ಆಶೀರ್ವಚನ ನೀಡಲಿದ್ದಾರೆ.