ನಾಳೆಯಿಂದ ಶತ ಚಂಡಿಕಾಯಾಗ
ದೊಡ್ಡಬಳ್ಳಾಪುರ: ಇದೇ 22ರಿಂದ ಇಲ್ಲಿನ ಶಾಂತಿನಗರದಲ್ಲಿ ಶ್ರೀ ಮುತ್ಯಾಲದೇವಿ ಅಮ್ಮನವರ ಜೀರ್ಣೋದ್ಧಾರ ಪುನಃ ಪ್ರತಿಷ್ಠಾಪನಾ ನೂತನ ಆಲಯ ಗೋಪುರ ಕಳಶ ಕುಂಭಾಭಿಷೇಕ ಹಾಗೂ ಶತ ಚಂಡಿಕಾಯಾಗ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿದೆ.
24ರಂದು ಶ್ರೀ ಮುತ್ಯಾಲದೇವಿ ಅಮ್ಮನವರ ಜೀರ್ಣೋದ್ಧಾರ ಪುನಃ ಪ್ರತಿಷ್ಠಾಪನಾ ನೂತನ ಆಲಯ ಗೋಪುರ ಕಳಶ ಕುಂಭಾಭಿಷೇಕ ಹಾಗೂ ಶತಚಂಡಿಕಾಯಾಗ ಮಹೋತ್ಸವವು ಬೆಂಗಳೂರಿನ ಹೊಸಕೆರೆಹಳ್ಳಿ ಬನಶಂಕರಿಯ ಯೋಗೀಶ್ವರ ಸುಬ್ರಹ್ಮಣ್ಯಾನಂದಸ್ವಾಮಿ ಮಹಾರಾಜ್ ಸಂಸ್ಥಾನಂ ದತ್ತ ಪೀಠದ ಗುರುಗಳಾದ ಮಹರ್ಷಿ ಎನ್. ಗುರುದತ್ತ ಹಾಗೂ ಬ್ರಹರ್ಷಿ ಆನಂದ ಸಿದ್ಧಿಪೀಠದ ಮಹರ್ಷಿ ಜ್ಯೋತಿಷ್ಯ ತಜ್ಞರಾದ ಡಾ. ಆನಂದ ಗುರೂಜೀಯವರ ಸಮಕ್ಷಮದಲ್ಲಿ ಹಾಗೂ ಆದಿಶಂಕರಾಚಾರ್ಯ ತೋಟಕಾರ್ಯ ಪರಂಪರೆಯ ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಮಹಸ್ವಾಮಿಗಳ ಹಸ್ತದಿಂದ ನೆರವೇರುತ್ತದೆ. ಕಾರ್ಯಕ್ರಮದ ಅಂಗವಾಗಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.