ಮಕ್ಕಳೊಂದಿಗೆ ಸ್ಪರ್ಧಿಸಲು ಹಿಂಜರಿಕೆ: ಶಿವಶಂಕರ್
ಕನಕಪುರ: ಕಲಿಕಾ ನ್ಯೂನತೆ ಗ್ರಾಮೀಣ ಪ್ರದೇಶದ ಮಕ್ಕಳನ್ನು ಅತಿಯಾಗಿ ಕಾಡುತ್ತಿದ್ದು ಜಾಗತೀಕರಣದ ಇಂದಿನ ಯುಗದಲ್ಲಿ ನಗರದ ಮಕ್ಕಳೊಂದಿಗೆ ಸ್ಪರ್ಧಿಸಲು ಹಿಂಜರಿಯುವಂತಾಗಿದೆ. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕ ಎದುರಿಸಬೇಕಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಹೇಳಿದ್ದಾರೆ.
ಅವರು ಕನಕಪುರ ತಾಲೂಕು ಹೂಕುಂದ ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲೆ ಆವರಣದಲ್ಲಿ ಸರ್ವಶಿಕ್ಷಣ ಅಭಿಯಾನ ಹಾಗೂ ಶಿಕ್ಷಣ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 18 ದಿನಗಳ ಶೈಕ್ಷಣಿಕ ಕಲಿಕಾ ಶಿಬಿರದ ಸಮಾರೋಪ ನೆರವೇರಿಸಿ ಮಾತನಾಡುತ್ತಿದ್ದರು. ಶಿಬಿರದಲ್ಲಿ ತಾಲೂಕಿನ 24 ವಿವಿಧ ಶಾಲೆಗಳಲ್ಲಿನ ಕಲಿಕೆಯಲ್ಲಿ ತೀರಾ ಹಿಂದುಳಿದಿರುವ 62 ವಿದ್ಯಾರ್ಥಿಗಳಿಗೆ ಗಣಿತ, ಆಂಗ್ಲ ಹಾಗೂ ಕನ್ನಡ ಭಾಷೆಗಳ ತರಬೇತಿಯನ್ನು ನೀಡಲಾಯಿತು. ಶಿಬಿರದ ಉದ್ಘಾಟನೆಯನ್ನು ಶಿಕ್ಷಣ ಫೌಂಡೇಷನ್ಸಂಸ್ಥಾಪಕ ರಾಮಮೂರ್ತಿ ನೆರವೇರಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಮೀರ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳನ್ನು ಶೈಕ್ಷಣಿಕವಾಗಿ ಸಬಲೀಕರಣಗೊಳಿಸಲು ಶಿಕ್ಷಣ ಫೌಡೇಷನ್ರಾಜ್ಯದ ಗ್ರಾಮೀಣ ಪ್ರದೇಶದ ಒಂದು ಸಾವಿರ ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದು ಸರ್ವಾಂಗೀಣ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಆದ್ಯತೆ ನೀಡಿ ಅವರಿಗೆ ಶಿಬಿರದ ಮೂಲಕ ತಜ್ಞರಿಂದ ವಿಶೇಷ ತರಬೇತಿ ಒದಗಿಸಿ ಸಶಕ್ತಗೊಳಿಸಲಾಗುತ್ತಿದೆ ಎಂದು ರಾಮಮೂರ್ತಿ ನುಡಿದರು.
ಶಿಬಿರದಲ್ಲಿ ಶೈಕ್ಷಣಿಕ ತಜ್ಞರುಗಳಾದ ರಂಗಪ್ಪ, ರೂಪ, ಅರುಣ್, ಅಶ್ವತ್ಥ್, ವಿಶ್ವನಾಥ್ ಸಂಪನ್ಮೂಲ ವ್ಯಕ್ತಿಗಳಾಗಿ 18 ದಿನಗಳ ಕಾಲ ತರಬೇತಿ ನೀಡಿದರು.