ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿಚಾರ ಸಂಕಿರಣದ ಉದ್ಘಾಟನೆ

Rashmi Kasaragodu
Updated On : 21 Feb 2014, 1:46 am

ಕನಕಪುರ: ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ, ಚಿಂತನಾಶಕ್ತಿ, ವಿವೇಚನೆಗಳನ್ನು ಉತ್ತೇಜಿಸುವ ಸಲುವಾಗಿ ವಿಚಾರವೇದಿಕೆ ಮೂಲಕ ವಿವಿಧ ವಿಚಾರಮಂಡನೆ, ವಿಷಯಗಳ ಅಧ್ಯಯನಕ್ಕೆ ಒತ್ತಾಸೆ ನೀಡಲಾಗುತ್ತಿದೆ ಎಂದು ರೂರಲ್ ಪದವಿ ಕಾಲೇಜು ಪ್ರಾಂಶುಪಾಲರಾದ ಡಾ. ಶಿವಬಸವೇಗೌಡ ಹೇಳಿದ್ದಾರೆ.
ಅವರು ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವಿಚಾರ ಸಂಕಿರಣದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ವಿಭಾಗದ ಮುಖ್ಯಸ್ಥ ಡಾ.ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣದಲ್ಲಿ ದೇಶವನ್ನು ಕಾಡುತ್ತಿರುವ ಭಯೋತ್ಪಾದನೆ ಪಿಡುಗಿನ ಬಗ್ಗೆ ಕು.ಪುಣ್ಯಶ್ರೀ, ಭಾರತ ಅಮೆರಿಕ ಪರಮಾಣು ಒಪ್ಪಂದ ಕುರಿತಾಗಿ ಕು. ಶಶಿಕಲಾ, ಸಂವಿಧಾನ ಪರಾಮರ್ಶೆ ಆಯೋಗದ ಬಗ್ಗೆ ರಾಜೇಶ್ ಮತ್ತು ನಾಗೇಶ್, ಮಾಹಿತಿ ಹಕ್ಕು ಕಾಯಿದೆ ಕುರಿತಾಗಿ ಕು. ನಿಖಿತಾ ಪ್ರಬಂಧಗಳನ್ನು ಮಂಡಿಸಿದರು.
ವಿಭಾಗದ ಮುಖ್ಯಸ್ಥ ಡಾ.ಪುಟ್ಟಸ್ವಾಮಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಹಾಗೂ ಪ್ರೌಢಪ್ರಬಂಧಗಳನ್ನು ರಚಿಸುವ ವಿಧಾನ ಸಿದ್ಧತೆಗಳ ಬಗ್ಗೆ ಪದವಿ ತರಗತಿಗಳಲ್ಲಿಯೇ ಶಿಕ್ಷಣ ನೀಡುವುದರಿಂದ ಉನ್ನತ ವ್ಯಾಸಂಗಕ್ಕೆ ಖಚಿತವಾಗಿ ನೆರವಾಗಲಿದೆ ಎಂದು ಹೇಳಿದರು. ಪ್ರೊ. ಮಂಜುನಾಥ್ ಸ್ವಾಗತಿಸಿದರು. ಪ್ರೊ.ವಾಣಿ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement