ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಿದ್ಧಗಂಗಾಶ್ರೀಗಳಿಗೆ 'ಭಾರತ ರತ್ನ' ನೀಡಿ

Rashmi Kasaragodu
Updated On : 21 Feb 2014, 1:43 am

ಮಾಗಡಿ: ಸಿದ್ಧಗಂಗಾ ಕ್ಷೇತ್ರವನ್ನು ಅನ್ನ, ಭಕ್ತಿ, ಜ್ಞಾನದ ಮಹಾಮನೆಯನ್ನಾಗಿ ಪರಿವರ್ತಿಸಿದ ಡಾ.ಶಿವಕುಮಾರಸ್ವಾಮೀಜಿ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪಶಸ್ತಿ ಘೋಷಿಸಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಬಿ.ವಿ.ಜಯರಾಮು ಆಗ್ರಹಿಸಿದರು.
ಅವರು ಮಾಗಡಿ ಪಟ್ಟಣದಲ್ಲಿ ಸಿದ್ಧಗಂಗಾ ಕ್ಷೇತ್ರದ ಮಠಾಧೀಶ ಶಿವಕುಮಾರಸ್ವಾಮೀಜಿ ಅವರ ಹಟ್ಟು ಹಬ್ಬದ ಪ್ರಯುಕ್ತ ಮಾಗಡಿ ತಾಲೂಕು ದಿ. ದೇವರಾಜ ಅರಸು ವಿಚಾರ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಹಾರ ಹಾಕಿ ಗುರುವಂದನೆ ಸಲ್ಲಿಸಿ ಮಾತನಾಡಿದರು.
   ಸಿದ್ಧಗಂಗೆ ಎಂದರೇ ಅದು ಕೇವಲ ಮಠವಲ್ಲ, ಅದೊಂದು ವಿಶ್ವವಿದ್ಯಾಲಯ ಎಂದು  ಪುರಸಭೆಯ ಮಾಜಿ ಅಧ್ಯಕ್ಷ ಪಿ.ವಿ. ಸೀತಾರಾಂ ತಿಳಿಸಿದರು.    ಶಿಕ್ಷಕ ಮಾರಣ್ಣ, ಪಿಎಲ್‌ಡಿ ಬ್ಯಾಂಕ್  ಅಧ್ಯಕ್ಷ ಸೀಬೇಗೌಡ, ತಾ.ಪಂ. ಮಾಜಿ ಉಪಾಧ್ಯಕ್ಷ ಕೆ.ಜಿ. ಉದ್ದೀಶ್,  ರಂಗಹನುಮಯ್ಯ, ಎಂ.ಎಸ್. ಸಿದ್ದಲಿಂಗೇಶ್ವರ್, ಮಹೇಶ್, ಮಂಜುನಾಥ್, ನಾಗರಾಜು, ರಾಜು, ಕಂದಾಯ ಇಲಾಖೆಯ ಶಿರಸ್ತೇದಾರ್ ಗುರುಲಿಂಗಯ್ಯ, ರೆವಿನ್ಯೂ ಅಧಿಕಾರಿ ಮಹಲಿಂಗಪ್ಪ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement