ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ
ವಿಜಯಪುರ: ಪಟ್ಟಣ ಸಮೀಪದ ಹಾರೋಹಳ್ಳಿ ಗ್ರಾಮದಲ್ಲಿ ಸುಮಾರು 120 ಮೀಟರ್ ಕಾಂಕ್ರಿಟ್ ರಸ್ತೆ ಹಾಗೂ 75ಮೀಟರ್ ಕಾಂಕ್ರಿಟ್ ಚರಂಡಿಗೆ ಗ್ರಾಪಂ ಸದಸ್ಯ ಹಾರೋಹಳ್ಳಿ ರಾಜ್ಗೋಪಾಲ್ ಪೂಜೆ ಸಲ್ಲಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ರು.10 ಲಕ್ಷದ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೋರಮಂಗಲ ಮುಖ್ಯ ರಸ್ತೆಯಿಂದ ತಿಮ್ಮರಾಯದ ಮನೆಯವರೆಗೆ ಹಾಗೂ ಬಿ.ಎಸ್. ನಾರಾಯಣಸ್ವಾಮಿ ಮನೆಯಿಂದ ನಲ್ಲಪ್ಪನ ಮನೆಯವರೆಗೆ ನೂತನ ರಸ್ತೆ ನಿರ್ಮಾಣ ಹಾಗೂ ಕಾಂಕ್ರಿಟ್ ಚರಂಡಿ ನಿರ್ಮಿಸಲಾಗುತ್ತಿದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಬಿ.ಕೆ.ಶಿವಪ್ಪ, ಗ್ರಾಪಂ ಸದಸ್ಯರಾದ ಲಕ್ಷ್ಮಮ್ಮ ಗಂಗಾಧರ್ ಮುನಿನಾರಾಯಣಮ್ಮ, ಮುನಿರಾಜು, ಇಂಜಿನಿಯರ್ ಆನಂದ್ ಕುಮಾರ್, ಗ್ರಾಮದ ಹಿರಿಯರಾದ ಸಿ.ರಾಜಣ್ಣ, ಎಚ್.ಎಸ್. ಮುನಿರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.