ಕಾಡುಗೊಲ್ಲ ಸಮುದಾಯದ ಯುವಕರು ಸಂಘಟಿತರಾಗಲಿ
ಮಾಗಡಿ: ಕಾಡುಗೊಲ್ಲ ಸಮುದಾಯದ ಯುವಕರು ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಜಾಗೃತಿ ಮೂಡಿಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಾಯನ ಕೇಂದ್ರದ ಡಾ.ಚಿತ್ತಯ್ಯ ಪೂಜಾರ್ ಕರೆ ನೀಡಿದರು.
ಅವರು ತಟವಾಳು ಗೊಲ್ಲರಹಟ್ಟಿಯ ಶ್ರೀಕೃಷ್ಣ ಯುವಕರ ಸಂಘದ ವತಿಯಿಂದ ನಡೆದ ಹೊಂಬಾಳೆ ಮಹೋತ್ಸವ ಹಾಗೂ ಯುವ ಜನ ಜಾಗೃತಿ ಸಮಾವೇಶದಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು. ಶಿಕ್ಷಕ ಮಾರಣ್ಣ ಮಾತನಾಡಿದರು.
ಶ್ರೀಕೃಷ್ಣ ಯುವಕರ ಸಂಘದ ಅಧ್ಯಕ್ಷ ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜ್ಜಪ್ಪಸ್ವಾಮಿ,ಪೂಜಾರ್ ಚಿತ್ತಯ್ಯ, ಕಾಟೇಗೌಡ, ಕರಿಯಪ್ಪ, ರಾಮಣ್ಣ, ರಾಘವೇಂದ್ರ, ಚಿತ್ತಯ್ಯ, ಕ್ಯಾತಯ್ಯ,ಶಿವಣ್ಣ, ಕಲಾವಿದ ಈರಣ್ಣ, ಕರಿಯಪ್ಪ, ಶಿವಲಿಂಗಯ್ಯ, ಚಿನ್ನಿ, ನಾಗರಾಜು ಇತರರು ಭಾಗವಹಿಸಿದ್ದರು.