ಜಯಲಲಿತಾ ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ
ಆನೇಕಲ್ಲು: ಯಾವುದೇ ಮಹಿಳೆ ನ್ಯಾಯದ ವಿರುದ್ಧ ಸೊಲ್ಲೆತ್ತುವುದಿಲ್ಲ. ಮಾತೆ, ದೇವಿ ಎಂಬ ಗೌರವಕ್ಕೆ ಪಾತ್ರವಾಗಿರುವ ಮಹಿಳೆಯ ಗುಣ ಗಳಿಗೆ ವಿರುದ್ಧವಾಗಿ ನಡೆದುಕೊಂಡು ರಾಜಕೀಯ ಲಾಭದ ದುರುದ್ದೇಶದಿಂದ ಹೊಂದಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ನೀಚ ಆಲೋಚನೆ ಹಾಗೂ ಹೇಳಿಕೆ ಖಂಡನೀಯ ಎಂದು ಆನೇಕಲ್ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಎ.ಎನ್. ನರೇಂದ್ರ
ಕುಮಾರ್ ಕಿಡಿಕಾರಿದರು. ಇಲ್ಲಿನ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಯುವಕರನ್ನುದ್ದೇಶಿಸಿ ಮಾತನಾಡಿದರು. ಯುವ ಕಾಂಗ್ರೆಸ್ ಮುಖಂಡರಾದ ಪಿ. ವೆಂಕಟೇಶ್, ಚಂದ್ರಶೇಖರ್, ತೋಸಿಫ್, ಜಗದೀಶ್, ರಾಜಶೇಖರ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.