ನೀರಿನ ಘಟಕಕ್ಕೆ ಗಾಜು: ದೂರು
ಚನ್ನಪಟ್ಟಣ: ಮತ್ತೀಕೆರೆ-ಶೆಟ್ಟಿಹಳ್ಳಿ ಬಳಿ ಉದ್ಘಾಟನೆಗೆ ಸಿದ್ದ ಗೊಂಡಿರುವ ಶುದ್ದಕುಡಿಯುವ ನೀರಿನ ಘಟಕದ ಗಾಜನ್ನು ಕೆಲ ದುಷ್ಕರ್ಮಿಗಳು ಹಾನಿ ಮಾಡಿರುವುದಾಗಿ ಗ್ರಾಮಸ್ಥರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಶಾಸಕರು ಮತ್ತು ಸ್ಥಳೀಯರಿಂದ ಧೇಣಿಗೆ ಸಂಗ್ರಹಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಲಾಗಿದ್ದು, ನೀರಿನ ಸೌಲಭ್ಯ ಇಲ್ಲದ ಕಾರಣ ಘಟಕ ಕಾರ್ಯಾರಂಭ ಮಾಡಲು ವಿಳಂಬವಾಗಿತ್ತು.
ದುಷ್ಕರ್ಮಿಗಳು ಕಟ್ಟಡದ ಕಿಟಕಿಗಳಿಗೆ ಹಾಕಲಾಗಿದ್ದ ಗಾಜನ್ನು ಒಡೆದು ಹಾಕಿದ್ದಾರೆ. ಲಕ್ಷಾಂತರ ರುಪಾಯಿ ಬೆಲೆ ಬಾಳುವ ಯಂತ್ರಗಳು ಇಲ್ಲಿರುವ ಕಾರಣ ಈ ಯಂತ್ರವನ್ನು ಕಳವು ಮಾಡಲು ಯತ್ನಿಸಿರಬಹುದೆಂದು ಗ್ರಾಮಸ್ಥರು ಶಂಕಿಸಿದ್ದಾರೆ.