ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಾಪುಲೆ ಜನ್ಮದಿನ ಪ್ರಯುಕ್ತ ವಸ್ತ್ರದಾನ

Rashmi Kasaragodu
Updated On : 22 Feb 2014, 2:13 am

ಆನೇಕಲ್ಲು: ಸ್ವತಂತ್ರ ಪೂರ್ವದಲ್ಲೇ ಅಸ್ಪೃಶ್ಯರು ಹಾಗೂ ಮಹಿಳೆಯರಿಗೆ ಶಿಕ್ಷಣ ನೀಡಲು ಮುಂದಾದ ಮಹನೀಯರು ಮಹಾತ್ಮ ಜ್ಯೋತಿ ಬಾಪುಲೆ ಎಂದು ಪ್ರಜಾ ವಿಮೋಚನಾ ಚಳವಳಿ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ  ಅಭಿಪ್ರಾಯಪಟ್ಟರು.
ಬೆಂಗಳೂರು ದಕ್ಷಿಣ ಎಲೆಕ್ಟ್ರಾನಿಕ್ ಸಿಟಿ ಬಳಿ ಬೆಂಗಳೂರು ವಿಭಾಗೀಯ ಪಿವಿಸಿ(ಎಸ್) ಕಾರ್ಯಕರ್ತರು ಏರ್ಪಡಿಸಿದ್ದ ಮಹಾತ್ಮ ಬಾಪುಲೆರವರ 187ನೆ ಜನ್ಮ ದಿನಾಚರಣೆಯಲ್ಲಿ ನೂರಾರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಮನುವಾದಿಗಳ ವಿರೋಧದ ನಡುವೆ ತಮ್ಮ ಜೀವವನ್ನು ಪಣಕ್ಕಿಟ್ಟು ಅಸ್ಪೃಶ್ಯರು ಹಾಗೂ ಮಹಿಳೆಯರಿಗೆ ಶಿಕ್ಷಣ ನೀಡಲು ಬಾಪುಲೆ ಹಾಗೂ ಮಾತೆ ಸಾವಿತ್ರಿ ಬಾಯಿ ಪುಲೆ ರವರು ಹೋರಾಟ ನಡೆಸಿ ಯಶಸ್ವಿಯಾದರು. ಅವರುಗಳ ಆದರ್ಶ ಹಾಗೂ ವಿಚಾರಧಾರೆ ಇಂದಿಗೂ ಪ್ರಸ್ತುತವಾಗಿದೆ. ಆಳುವ ಸರ್ಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರದೇ ಹಣವಂತರ ಮೂಗಿಗೆ ನೀರವಾಗಿ ಶಿಕ್ಷಣ ನೀತಿ ರೂಪಿಸಿ ದೀನ ದಲಿತರ ಬಾಳಿಗೆ ಮುಳ್ಳಿನ ಹಾದಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿಆಂಜಿನಪ್ಪ ಮಾತನಾಡಿದರು.
ಪ್ರೊ. ಸಮತಾ ದೇಶಮಾನೆ, ಕೆ.ಎಲ್. ಶಂಕರ್, ಭಾಸ್ಕರ್ಶೆಟ್ಟಿ, ಇಂಡ್ಲವಾಡಿ ಬಸವರಾಜು ವೃದ್ಧ ಮಾತೆಯರಿಗೆ ವಸ್ತ್ರದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement