ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪುರಪಿತೃವನ್ನು ಸ್ಮರಿಸುವ ಕೆಲಸ ಆಗಲಿ

Mainashree
Updated On : 22 Feb 2014, 11:53 am

ದೊಡ್ಡಬಳ್ಳಾಪುರ: ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ ಜನ್ಮದಿನಾಚರಣೆ ಸಮಿತಿಯನ್ನು ಸ್ಥಾಪಿಸಿ ಪ್ರತಿವರ್ಷ ಪುರಪಿತೃವನ್ನು ಸ್ಮರಿಸುವ ಕೆಲಸ ಆಗಬೇಕು ಎಂದು ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಆಗ್ರಹಿಸಿದೆ.
ಇಲ್ಲಿನ ಸಂಜಯನಗರದಲ್ಲಿರುವ ಕೊಂಗಾಡಿಯಪ್ಪ ಸಮಾಧಿ ಸ್ಥಳದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಲಾಯಿತು.
ಈ ಸಮಿತಿಯ ನೇತೃತ್ವದಲ್ಲಿ ರಾಜ್ಯದ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ದೊಡ್ಡಬಳ್ಳಾಪುರ ತಾಲೂಕಿನ ಎಲ್ಲ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಹಾಗೂ ಸರ್ಕಾರದ ಮಾನ್ಯತೆ,
ಅನುದಾನ ಪಡೆಯುವ ಎಲ್ಲಾ ವೃತ್ತಿಪರ ಕಾಲೇಜುಗಳಲ್ಲಿ 2015ರಿಂದ ಕೊಂಗಾಡಿಯಪ್ಪ ದಿನಾಚರಣೆ ಆಚರಿಸಲು ಆದೇಶ ಹೊರಡಿಸಬೇಕು. ಈ ದಿಸೆಯಲ್ಲಿ ಆದಷ್ಟೂ ಬೇಗ ಕಾರ್ಯೋನ್ಮುಖರಾಗಬೇಕು. ಕೊಂಗಾಡಿಯಪ್ಪ ಸ್ಮೃತಿವನ, ಸಾಕ್ಷ್ಯಚಿತ್ರ ತಯಾರಿಕೆ, ಸ್ಮಾರಕ ಭವನ, ಹೊಸ ಪುತ್ಥಳಿ ನಿರ್ಮಾಣ, ಪುಸ್ತಕ ಬಿಡುಗಡೆ, 10 ಸಾವಿರ ಗಿಡ ನೆಡುವ ಕಾರ್ಯಕ್ರಮ, ಗ್ರಂಥಾಲಯ ನಿರ್ಮಾಣ ಆಗಬೇಕು ಎಂದು ಆಗ್ರಹಿಸಿದರು.
ಶಿಕ್ಷಕ ವೃತ್ತಿ ನಿರ್ವಹಣೆ ಮಾಡುತ್ತಾ ಸಮಾಜ, ಊರಿನ ಪ್ರಗತಿಗೆ ಚಿಂತಿಸಿ, ಕಾರ್ಯರೂಪಕ್ಕೆ ತಂದು ಅನ್ನದಾಸೋಹ, ಜ್ಞಾನ ದಾಸೋಹದೊಂದಿಗೆ ಯಾವುದೇ ಹುದ್ದೆ ಹೊಂದಿಲ್ಲದೆ ಊರಿನ ಬೆಳವಣಿಗೆಗೆ ಶ್ರಮಿಸಬೇಕಿದೆ. ಇಂತಹವರ ಆದರ್ಶದ ನೆರಳು ಶಾಶ್ವತವಾಗಿ ಉಳಿಯಬೇಕಾದರೆ ಅವರ ಹೆಸರಿನಲ್ಲಿ ಶಾಶ್ವತ ಕಾರ್ಯಚಟುವಟಿಕೆಗಳು ನಡೆಯುತ್ತಿರಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕೊಂಗಾಡಿಯಪ್ಪ ಸಮಾಧಿ ಸ್ಥಳಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿಯ ಡಿ.ಆರ್.ನಟರಾಜ್, ಎಸ್.ನಟರಾಜ್, ಎನ್.ಸಿ.ಲಕ್ಷ್ಮೀ, ಹನುಮಂತರಾಯಪ್ಪ, ಸಿ.ವೆಂಕಟರಾಜು, ಸೌಭಾಗ್ಯ, ಜಯಮ್ಮ, ಡಾ.ಎ.ಓ.ಆವಲಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement