ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Mainashree
Updated On : 22 Feb 2014, 11:54 am

ಸರ್ ಎಂ.ವಿ ಕ್ರೆಡಿಟ್  ಸೊಸೈಟಿ ನೂತನ ಆಡಳಿತ ಮಂಡಳಿ
ಕನಕಪುರ: ಕನಕಪುರದ ಪ್ರತಿಷ್ಠಿತ ಸರ್ ಎಂ. ವಿಶ್ವೇಶ್ವರಯ್ಯ ಕ್ರೆಡಿಟ್‌ಕೋ ಆಪರೇಟಿವ್ ಸೊಸೈಟಿಯ ನೂತನ ಆಡಳಿತ ಮಂಡಳಿ ಚುನಾವಣೆ ಅವಿರೋಧವಾಗಿ ನಡೆಯಿತು. ಚುನಾವಣಾಧಿಕಾರಿಗಳಾಗಿ ಸಹಕಾರ ಇಲಾಖೆ ಸಹಾಯಕ ನೋಂದಣಾಧಿಕಾರಿ ಪ್ರೇಮಾನಂದ ಹಾಗೂ ಬಿ.ಎಸ್.ನಾಗರಾಜ್ ಕಾರ್ಯ ನಿರ್ವಹಿಸಿದರು.   ಎಸ್‌ಎಂವಿಸಿಸಿಎಸ್ ಸೊಸೈಟಿಯ ನೂತನ ಆಡಳಿತ ಮಂಡಳಿ ಸದಸ್ಯರಾಗಿ ಡಿ.ವೆಂಕಟರಮಣಸ್ವಾಮಿ (ಗುಂಡಣ್ಣ), ಡಿ.ಲಕ್ಷ್ಮೀಕಾಂತ (ಕಾಂತು), ಕೈಲಾಸಶಂಕರ್, ಎಂ.ಮೋಹನದಾಸ್, ಆರ್.ಮೋಹನದಾಸ್, ಕಾಮೇಶ್, ಬಿಳಿಗಿರಿ ರಂಗಸ್ವಾಮಿ, ಭಾರತಿ ಗುರಪ್ಪ, ಕಲ್ಪನಾ ಮಹದೇವಪ್ರಸಾದ್, ಕೆ.ಆರ್.ಸುರೇಶ್‌ಕುಮಾರ್, ರವಿಪಾಲ್ ಹಾಗೂ ಉಮೇಶ್‌ಕುಮಾರ್ ಆಯ್ಕೆಗೊಂಡಿದ್ದಾರೆ ಎಂದು ಪ್ರಭಾರ ಕಾರ್ಯದರ್ಶಿ ಸೌಮ್ಯ ತಿಳಿಸಿದ್ದಾರೆ.
ನಿರ್ದೇಶಕರಾಗಿ ಆಯ್ಕೆ
ಆನೇಕಲ್ ತಾಲೂಕು ಹೆನ್ನಾಗರದ ಎಪಿಎಂಸಿ ನಿರ್ದೇಶಕ ಎಂ. ಬಾಬು ಅವರು 2 ನೇ ಬಾರಿಗೆ ರಾಷ್ಟ್ರೀಯ
ತೋಟಗಾರಿಕೆ ನಿರ್ದೇಶಕರಾಗಿ ನೇಮಕವಾಗಿದ್ದಾರೆ.
ಜಿ.ಪಂ. ಅಧ್ಕಕ್ಷ ಎಚ್.ಸಿ.ರಾಜು ರಾಜಿನಾಮೆ ತಿರಸ್ಕೃತ
ರಾಮನಗರ: ಜಿ.ಪಂ. ಅಧ್ಕಕ್ಷ ಎಚ್.ಸಿ.ರಾಜು ಅವರು ತಮ್ಮ ಸ್ಥಾನಕ್ಕೆ ಸಲ್ಲಿಸಿದ್ದ ರಾಜಿನಾಮೆ ಕ್ರಮಬದ್ಧವಾಗಿರದ ಕಾರಣ ಅದನ್ನು ಅಂಗೀಕರಿಸಲು ಪ್ರಾದೇಶಿಕ ಆಯುಕ್ತರು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜು ಅವರು ಶನಿವಾರ ಮತ್ತೆ 2ನೇ ಬಾರಿಗೆ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್‌ನಲ್ಲಿ ಆಗಿದ್ದ ಅಧಿಕಾರ ಹಂಚಿಕೆ ಸೂತ್ರದಂತೆ 15 ದಿನದ ಹಿಂದೆ ರಾಜು ಅವರು ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಆದರೆ, ಇವರು ಪ್ರಾದೇಶಿಕ ಆಯುಕ್ತರಿಗೆ ನೇರವಾಗಿ ಸಲ್ಲಿಸದೆ ಟಪಾಲ್ ವಿಭಾಗಕ್ಕೆ ಸಲ್ಲಿಸಿದ್ದರಿಂದ ಪ್ರಾದೇಶಿಕ ಆಯುಕ್ತರು ರಾಜಿನಾಮೆಯನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜು ಅವರು ಶನಿವಾರ 2ನೇ ಬಾರಿಗೆ ಖುದ್ದು ಪ್ರಾದೇಶಿಕ ಆಯುಕ್ತರಿಗೆ ತಮ್ಮ ರಾಜಿನಾಮೆ ಸಲ್ಲಿಸಿದ್ದು, ಯಾವುದೇ ಅಡೆತಡೆಗಳು ಎದುರಾಗದಿದ್ದಲ್ಲಿ ಮಾ.8ಕ್ಕೆ ರಾಜಿನಾಮೆ ಅಂಗೀಕೃತಗೊಳ್ಳಲಿದೆ.
ದೇವನಹಳ್ಳಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ
ದೇವನಹಳ್ಳಿ :ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಎಸ್‌ಎಲ್‌ಎನ್  ವಿದ್ಯಾಸಂಸ್ಥೆ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಸಮಾರಂಭದ ಉದ್ಘಾಟನೆಯನ್ನು ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸ ನೆರವೇರಿಸಿ ಜನಸಾಮಾನ್ಯರ ಮಟ್ಟದಲ್ಲಿ ಅವರ ದೈನಂದಿನ ಜೀವನಕ್ಕೆ ಸಂಬಂಧಪಟ್ಟಂತೆ ಕಾನೂನಿನ ಪ್ರಸಾರ ಮಾಡುವುದೇ ಕಾನೂನು ಅರಿವು ಹಾಗೂ ತಿಳಿವಳಿಕೆ ನೀಡುವುದು ಸಮಾರಂಭದ ಉದ್ದೇಶವಾಗಿದ್ದು ಶಾಲೆಗಳಲ್ಲಿ ವಿದ್ಯಾರ್ಥಿಗಳು ಮಾಡುವ ತಪ್ಪಿಗೆ ಶಿಕ್ಷಕರು ಮನ್ನಿಸಬಹುದು. ಆದರೆ ನ್ಯಾಯಾಲಯಗಳಲ್ಲಿ ತಪ್ಪು ಮಾಡಿದ ವ್ಯಕ್ತಿಗೆ ಮತ್ತು ಕಾನೂನು ಗೊತ್ತಿಲ್ಲದೆ ಮಾಡಿದ ತಪ್ಪಿಗೆ ಕ್ಷಮೆ ಇರುವುದಿಲ್ಲ. ಬಾಲಕಾರ್ಮಿಕ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ  ಕರ್ತವ್ಯ ಎಂದರು.  ಇದೇ ಸಂದರ್ಭದಲ್ಲಿ ವಕೀಲರಾದ ಶಿವಕುಮಾರ್ ಮೋಟಾರು ವಾಹನ ಕಾಯಿದೆ ಹಾಗೂ ಬಾಲಕಾರ್ಮಿಕ ವಿರೋಧಿ ಕಾಯಿದೆಗಳ ಬಗ್ಗೆ ಮಾತನಾಡಿ ಪ್ರತಿಯೊಬ್ಬರು ವಾಹನ ಚಲಾಯಿಸುವುದಕ್ಕೆ ಮುನ್ನ ಅಗತ್ಯವಾದ ಲೈಸನ್ಸ್ ಪಡೆದಿರಬೇಕು ಮತ್ತು ವಾಹನಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಇಟ್ಟಿರಬೇಕು. ಜೊತೆಯಲ್ಲಿ ವಾಹನ ರಸ್ತೆ ಸಂಚಾರ ನಿಯಮಗಳ ಬಗ್ಗೆ ಅರಿವು ಇರಬೇಕು ಎಂದರು. ಅಧ್ಯಕ್ಷತೆಯನ್ನು ಶಾಲೆಯ ಕಾರ್ಯದರ್ಶಿ ಡಿ.ಎಸ್. ಧನಂಜಯ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement