ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಟ್ರಾಫಿಕ್ ಕಿರಿಕಿರಿಗೆ ಪ್ರಯಾಣಿಕರು, ವಿದ್ಯಾರ್ಥಿಗಳು ಹೈರಾಣ

Mainashree
Updated On : 23 Feb 2014, 11:20 am

ಕ.ಪ್ರ.ವಾರ್ತೆ ್ಣ ಸೂಲಿಬೆಲೆ ್ಣ ಫೆ.23
ಸೂಲಿಬೆಲೆ ಪಟ್ಟಣದಲ್ಲಿ ಅತಿ ಹೆಚ್ಚು ವಾಹನ ದಟ್ಟಣಿಯಿರುವ ಡಿ.ಕ್ರಾಸ್‌ನಲ್ಲಿ  ಟ್ರಾಫಿಕ್ ಕಿರಿಕಿರಿಯಿಂದ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ನಿತ್ಯ ಹೈರಾಣರಾಗುವಂತಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಹೊಸಕೋಟೆ ಕಡೆಯಿಂದ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 207 ಸೂಲಿಬೆಲೆ ಮಾರ್ಗವಾಗಿ ದೇವನಹಳ್ಳಿಗೆ ಹೆದ್ದಾರಿ ನಿಮಾರ್ಣವಾಗಿದೆ. ಸೂಲಿಬೆಲೆ ಡಿ.ಕ್ರಾಸ್‌ನಲ್ಲಿ ಮೂರು ಕಡೆ ಹೆದ್ದಾರಿ ವಿಭಜನೆಗೊಂಡಿದ್ದು, ಇಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುವದರಿಂದ ನಿತ್ಯ ಟ್ರಾಫಿಕ್ ಕಿರಿಕಿರಿಯಾಗುತ್ತಿದೆ. ಹೆದ್ದಾರಿ ದಾಟಲು ವಿದ್ಯಾರ್ಥಿಗಳು, ಪ್ರಯಾಣಿಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವಂತಾಗಿದೆ. ವಿಭಜನೆಯಾಗಿರುವ ಹೆದ್ದಾರಿಯ ಮೂರು ಕಡೆ ಅಂಗಡಿ ಮುಂಗಟ್ಟುಗಳು, ಅಶ್ವತ್ಥಕಟ್ಟೆ,
ಇದಕ್ಕೆ ಹೊಂದಿಕೊಂಡಂತೆ ವಿವೇಕಾನಂದ ಹಿರಿಯ ಹಾಗೂ ಪ್ರೌಢಶಾಲೆಯಿದ್ದು, ಇಲ್ಲಿ ಕಲಿಕೆಗೆ ಬರುವ ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು  ಹೆದ್ದಾರಿಯನ್ನು ದಾಟಬೇಕಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಗ್ಯಾರೆಂಟಿ ಎನ್ನುವಂತಿದೆ. ಮೂರು ರಸ್ತೆಯ ಇಕ್ಕೆಲೆಗಳಲ್ಲಿ ಫುಟ್ಪಾತ್ ಇಲ್ಲದಿರುವುದು ಟ್ರಾಫಿಕ್ ಕಿರಿಕಿರಿಗೆ ಕಾರಣವಾಗುತ್ತಿದೆ.
ಮೋರಿ ಅಡ್ಡ: ವಿಭಜನೆ ಹೊಂದಿರುವ ಹೆದ್ದಾರಿ ಡಿ.ಕ್ರಾಸ್‌ನ ಪ್ರದೇಶ ಕಿರಿದಾಗಿದ್ದು ಏಕಕಾಲಕ್ಕೆ ಮೂರು ಕಡೆಯಿಂದ ಬರುವ ವಾಹನಗಳು ಸರಾಗವಾಗಿ ಚಲಿಸುವಂತ ಮಾರ್ಗವಿಲ್ಲದೆ ಮೋರಿ ಅಡ್ಡವಾಗಿದೆ. ಮೋರಿಗೆ ಹೊಂದಿಕೊಂಡಂತೆ ಬ್ಯಾನರ್ಸ್, ಬಟಿಂಗ್ಸ್ ಹಾಕಿರುವ ಕಾರಣ ಹೆದ್ದಾರಿ ಎದರು, ಬದರು ಕಡೆಯಿಂದ ಬರುವ ವಾಹನಗಳು ಒಂದಕ್ಕೊಂದು ಕಾಣದೆ ತಿರುವಿನಲ್ಲಿ ಡಿಕ್ಕಿಯಾಗುವ ಸಂಭವ ಹೆಚ್ಚಾಗಿದೆ.
ಭಾನುವಾರ ಹೆಚ್ಚು ಕಿರಿಕಿರಿ: ಡಿ.ಕ್ರಾಸ್ ದೇವನಹಳ್ಳಿ ಕಡೆ ಹೆದ್ದಾರಿಯಲ್ಲಿ ಕೋಳಿ, ಹಂದಿಮಾಂಸದ ಅಂಗಡಿಗಳು ಫುಟ್ಪಾತ್ ಮೇಲೆ ಕಾರ್ಯನಿರ್ವಹಿಸುತ್ತಿರುವುದರಿಂದ ಈ ಮಾರ್ಗವಾಗಿ ಬರುವ ದ್ವಿಚಕ್ರವಾಹನಗಳು, ಸರಕು ಹೊತ್ತು ಬರುವ ಲಾರಿಗಳು ಫುಟ್ಪಾತ್ ಇಲ್ಲದೆ ಹೆದ್ದಾರಿಯಲ್ಲಿಯೇ ಸಾಲುಗಟ್ಟಿ ನಿಲ್ಲುವಂತಾಗಿದೆ. ಭಾನುವಾರ ಸೂಲಿಬೆಲೆಯಲ್ಲಿ ಸಂತೆ ನಡೆಯುವ ಕಾರಣ ಹಳ್ಳಿಗಳಿಂದ ಬರುವ ಜನರು, ವಾಹನಗಳು ಡಿ.ಕ್ರಾಸ್‌ನಲ್ಲಿ ಜಾಮ್ ಆಗಿ ಜನರು ನಾನಾ ರೀತಿಯ ಅವ್ಯವಸ್ಥೆಯನ್ನು ಎದುರಿಸುವಂತಾಗಿದೆ.
ಡಿ.ಕ್ರಾಸ್‌ನಲ್ಲಿ ಫುಟ್ಪಾತ್ ಅನ್ನು ವಿಸ್ತರಣೆ ಮಾಡುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ. ಫುಟ್ಪಾತ್ ಹಾಗೂ ಮೋರಿ ವಿಸ್ತರಣೆಯಿಂದ  ಹೆದ್ದಾರಿ ವಿಶಾಲತೆಯನ್ನು  ಪಡೆಯಲಿದ್ದು, ಪ್ರಯಾಣಿಕರು, ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲವಾಗಲಿದೆ ಎಂದು  ಸ್ಥಳೀಯರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement