ವೋಲ್ವೋ ಬಸ್ ಹರಿದು ಸಾವು
ಕ.ಪ್ರ.ವಾರ್ತೆ ್ಣ ಆನೇಕಲ್ಲು ್ಣ ಫೆ.23
ಬೆಂಗಳೂರಿನ ಜೀಪೀ ಕಂಪನಿಗೆ ಸೇರಿದ ವೋಲ್ವೋ ಬಸ್ ಪಾದಚಾರಿಗೆ ಡಿಕ್ಕಿ ಹೊಡೆದ ಕಾರಣ ಪಾದಚಾರಿ ಸ್ಥಳದಲ್ಲೇ ಸತ್ತ ದಾರುಣ ಘಟನೆ ಅತ್ತಿಬೆಲೆ ಠಾಣಾ ವ್ಯಾಪ್ತಿಯ ನೆರಳೂರು ಗೇಟಿನಲ್ಲಿ ನಡೆದಿದೆ. ಉಮೇಶ (40) ಸಾವನ್ನಪ್ಪಿದ ವ್ಯಕ್ತಿ.
ಮೂಲತಃ ಶಿವಮೊಗ್ಗದವರಾದ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ನೆರಳೂರಿನಲ್ಲಿ ವಾಸವಿದ್ದರು ಎನ್ನಲಾಗಿದೆ. ಭಾನುವಾರ ಕಾರಣ ಅಂಗಡಿಯಲ್ಲಿ ಸಾಮಾನು ಕೊಂಡು ಮನೆಗೆ ಹಿಂತಿರುಗುವಾಗಿ ಈ ಘಟನೆ ಸಂಭವಿಸಿದೆ. ಜೇಬಿನಲ್ಲಿದ್ದ ಮೊಬೈಲ್ ಮೂಲಕ ಕರೆ ಮಾಡಿದಾಗ ಪತ್ನಿ ಹಾಗೂ ಮಗಳು ಬಂದು ಗುರುತಿಸಿದರು. ಕೂಡಲೇ ಸ್ಪರ್ಶ ಅಸ್ಪತ್ರೆಗೆ ಕರೆತರಲಾಯಿತಾದರೂ ಪ್ರಯೋಜನವಾಗಲಿಲ್ಲ ಎಂದು ಪಿಎಸ್ಸೈ ಚೇತನ್ ತಿಳಿಸಿದರು. ಬಸ್ನಲ್ಲೇ ಕುಳಿತಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಬಸ್ನಿಂದ ಇಳಿದಿರಲಿಲ್ಲ. ಪೊಲೀಸರು ಬಸ್ ವಶಕ್ಕೆ ಪಡೆದ ಮೇಲೆ ಬೇರೆ ಮಾರ್ಗವಿಲ್ಲದೇ ಬಸ್ನಿಂದ ಇಳಿದರು. ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿತ್ತು.