ಸುದ್ದಿ ಸಂಕ್ಷೇಪ
ವಿದ್ಯಾರ್ಥಿಗಳಿಗೆ ಅಭಿನಂದನೆ
ರಾಮನಗರ: ಪಾದರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 2013-14ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಮತ್ತು 2012-13ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವು ಫೆ. 25ರ ಮಧ್ಯಾಹ್ನ 2ಕ್ಕೆ ಶಾಲೆಯ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಉದ್ಘಾಟಿಸುವರು. ಜಿ.ಪಂ. ಸದಸ್ಯ ಎಚ್.ಎಲ್. ಚಂದ್ರ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಕೆ.ರಾಜು ಅವರು ಪ್ರತಿಭಾ ಪುರಸ್ಕಾರ ಮಾಡುವರು. ಮುಖ್ಯ ಶಿಕ್ಷಕ ಆರ್.ಕೆ. ಬೈರಲಿಂಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡುವರು. ತಾ.ಪಂ. ಸದಸ್ಯ ಸಿದ್ದಲಿಂಗೇಗೌಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮರಿದೇವರು, ಗ್ರಾ.ಪಂ. ಅಧ್ಯಕ್ಷ ಚಂದ್ರೇಗೌಡ ಬಹುಮಾನ ವಿತರಿಸುವರು. ನಗರಸಭೆ ಮಾಜಿ ಅಧ್ಯಕ್ಷ ಕೆ. ಶೇಷಾದ್ರಿ, ಡಿಡಿಪಿಐ ಪ್ರಹ್ಲಾದಗೌಡ ಭಾಗವಹಿಸುವರು.
ಸಿಂಚನಾ ರಂಗಪ್ರವೇಶ
ಹೊಸಕೋಟೆ: ಪಟ್ಟಣದ ವಿಶ್ವೇಶ್ವರಯ್ಯ ಬಡಾವಣೆಯ ಬಿ.ಎಲ್. ಗಿರೀಶ್, ರೀತನ್ ಅವರ ಪುತ್ರಿ (7) ಸಿಂಚನಾ ಮೋರೆ ಫೆ.24 ರಂದು ಬೆಂಗಳೂರಿನ ಕನ್ನಡ ಭವನದ ನಯನ ರಂಗಮಂದಿರದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾಳೆ. ಪಟ್ಟಣದ ಓಂ ಶ್ರೀ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ 3 ವರ್ಷಗಳಿಂದ ನವಚೇತನ ನೃತ್ಯಕಲಾ ಅಕಾಡೆಮಿಯಲ್ಲಿ ಅಂತಾರಾಷ್ಟ್ರೀಯ ನೃತ್ಯಪಟು ಗುರು ವಿದ್ವಾನ್ ಕೋಲಾರ ರಮೇಶ್ ಬಳಿ ಭರತನಾಟ್ಯ ಕಲಿಯುತ್ತಿದ್ದಾಳೆ.