ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಿಡದಿ, ಶ್ರೀಗಿರಿಪುರದಲ್ಲಿ ಕಾಡಾನೆಗಳ ಹಾವಳಿ

Rashmi Kasaragodu
Updated On : 25 Feb 2014, 1:27 am

ರಾಮನಗರ: ಅರಣ್ಯದಿಂದ ಆವರಿಸಿಕೊಂಡಿರುವ ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮತ್ತೆ ತಲೆದೋರಿದೆ. ಜಿಲ್ಲೆಯಲ್ಲಿ ಸೋಮವಾರ ಪ್ರತ್ಯೇಕ ಆನೆಗಳ ಹಿಂಡು ಎರಡು ಕಡೆ ಬೆಳೆ ನಾಶ ಪಡಿಸಿದ್ದಲ್ಲದೆ ಊರಂಚಿನಲ್ಲೇ ಬೀಡು ಬಿಟ್ಟು ಭೀತಿ ಮೂಡಿಸಿವೆ. ಅತ್ತ ಬನ್ನೇರುಘಟ್ಟ ಅರಣ್ಯದ 8 ಆನೆಗಳ ಹಿಂಡು ಭಾನುವಾರವೇ ರಾಮನಗರ ಜಿಲ್ಲೆಗೆ ಕಾಲಿಟ್ಟಿದ್ದು, ಸೋಮವಾರ ಬಿಡದಿ ಹೋಬಳಿಯ ಹುಚ್ಚಮ್ಮನದೊಡ್ಡಿ ಗ್ರಾಮದ ಬಳಿ ಕಬ್ಬು, ಬಾಳೆ ಬೆಳೆ ಮತ್ತು ರಾಗಿ ಬಣವೆಗಳನ್ನು ನಾಶಪಡಿಸಿದೆ. ಇತ್ತ ಸಾವನದುರ್ಗ ಅರಣ್ಯದಿಂದ ತಪ್ಪಿಸಿಕೊಂಡ 7 ಆನೆಗಳ ಹಿಂಡು, ಮಾಗಡಿ ತಾಲೂಕಿನ ಶ್ರೀಗಿರಿಪುರ ಸುತ್ತಮುತ್ತ ಬೀಡು ಬಿಟ್ಟಿದ್ದು, ಅವು ಕೂಡ ಬೆಳೆ ಹಾನಿ ನಡೆಸಿವೆ. ಊರಂಚಿನಲ್ಲೇ ಅಡ್ಡಾಡಿಕೊಂಡಿರುವ ಆನೆಗಳಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ಅರಣ್ಯ ಇಲಾಖೆಯ ಒಂದು ತಂಡ ಸೋಮವಾರ ಬೆಳಗ್ಗೆಯೇ ಸಾವನದುರ್ಗದ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಪ್ರಾರಂಭಿಸಿದ್ದು, ಆನೆಗಳು ಕಾಡಿನತ್ತ ಪಯಣ ಬೆಳೆಸದೆ ನೆಲಮಂಗಲ ಕಡೆ ದಾಂಗುಡಿ ಇಟ್ಟಿವೆ.
ಅಂತೆಯೇ ಹುಚ್ಚಮ್ಮನದೊಡ್ಡಿ ಆಸುಪಾಸಿನಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಬನ್ನೇರುಘಟ್ಟ ಅರಣ್ಯಕ್ಕೆ ಕಳುಹಿಸಲು ಅರಣ್ಯ ಇಲಾಖೆಯ ಮತ್ತೊಂದು ತಂಡ ಸಂಜೆ ವೇಳೆಗೆ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement