ಇಂದು ಜಾನುವಾರುಗಳಿಗೆ ಲಸಿಕೆ ಕಾರ್ಯಕ್ರಮ
ಮಾಗಡಿ: ಫೆ. 26 ರಂದು ಬೆಳಿಗ್ಗೆ 7 ಗಂಟೆಯಿಂದ ಕಸಬಾ ವ್ಯಾಪ್ತಿಯ 5 ಹಳ್ಳಿಗಳಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಗಡಿ ಪಟ್ಟಣದ ತಿರುಮಲೆ, ಪಣಕನಕಲ್ಲು,ತಿಮ್ಮಸಂದ್ರ, ಕಲ್ಲೆಂಟೆಪಾಳ್ಯ, ಭೈಚಾಪುರದ ಗ್ರಾಮಗಳಲ್ಲಿ ಲಸಿಕೆ ಕಾರ್ಯಕ್ರಮ ನಡೆಯಲಿದೆ. ರೈತರು ತಮ್ಮ ರಾಸುಗಳಿಗೆ ಕಡ್ಡಾಯವಾಗಿ ರೋಗನಿರೋಧಕ ಲಸಿಕೆ ಹಾಕಿಸುವಂತೆ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ. ರಾಜಶೇಖರ್ ಮನವಿ ಮಾಡಿದ್ದಾರೆ.