ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕೃಷಿಕ ಆತ್ಮಹತ್ಯೆ: ರೈತ ಹೋರಾಟಗಾರರ ಸಂತಾಪ

Rashmi Kasaragodu
Updated On : 26 Feb 2014, 1:09 am

ದೇವನಹಳ್ಳಿ: ಅಸ್ಸಾಂನ ಗುವಹಾಟಿಯಲ್ಲಿ ಭೂಮಿ ಹಕ್ಕು ಪತ್ರ ಒತ್ತಾಯಿಸಿ ರೈತ ಹೋರಾಟಗಾರ ಪ್ರಣವ್ ಬೊರೊ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇಲ್ಲಿನ ರೈತಪರ ಸಂಘಟನೆಗಳು ಹಾಗೂ ಇತರ ಸಂಘಸಂಸ್ಥೆಗಳ ಮುಖಂಡರು  ಪ್ರವಾಸಿ ಮಂದಿರದಲ್ಲಿ ಸಂತಾಪ ಸೂಚಕ ಸಭೆ ಮಾಜಿ ಪುರಸಭಾಧ್ಯಕ್ಷ ಎಸ್. ಲಕ್ಷ್ಮೀನಾರಾಯಣ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದರು.    ಜಿಲ್ಲಾರೈತ ಸಂಘದ ಅಧ್ಯಕ್ಷ ವೆಂಕಟನಾರಾಯಣಪ್ಪ , ಪ್ರಾಂತ ರೈತ ಸಂಘದ ಗೌರವಾಧ್ಯಕ್ಷ ನಾರಾಯಣಸ್ವಾಮಿ,   ಜೆಡಿಯು ಶ್ರೀನಿವಾಸ್, ವಕೀಲ ಚಿಕ್ಕನಾರಾಯಣಸ್ವಾಮಿ,  ತಾಲೂಕು ಸೊಸೈಟಿ ಅಧ್ಯಕ್ಷ ಗಂಗಾಧರ್ ರೈತ ಸಂಘದ ಸಾವುಕನಹಳ್ಳಿ ಗೋಪಾಲಸ್ವಾಮಿ ಮಾತನಾಡಿದರು. ಜಿಲ್ಲಾ ಹೋರಾಟ ಸಮಿತಿ ಮುಖ್ಯ ಸಂಚಾಲಕ ಬಿ.ಕೆ.ಶಿವಪ್ಪ ರೈತರ ಆತ್ಮಹತ್ಯೆ ಇನ್ನು ಮುಂದಾದರೂ ನಿಲ್ಲಲು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದರು. ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ವೀರಣ್ಣ, ರೈತ ಸಂಘದ ಮುನಿಶಾಮಪ್ಪ, ಜಾಲಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಎಂ. ಆನಂದಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement