ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಶೂನ್ಯ ಬಡ್ಡಿ ಸದುಪಯೋಗ ಪಡೆಯಿರಿ'

Rashmi Kasaragodu
Updated On : 26 Feb 2014, 1:11 am

ಆನೇಕಲ್ಲು: ಸಹಕಾರಿ ಮಿತ್ರರು ಬ್ಯಾಂಕು ಶೂನ್ಯ ಬಡ್ಡಿ ದರದಲ್ಲಿ ನೀಡುವ ಬೆಳೆ ಸಾಲವನ್ನು ಪಡೆದು ವ್ಯವಸಾಯ ಚಟುವಟಿಕೆಗಳನ್ನು ಉತ್ತಮ ಪಡಿಸಬೇಕೆಂದು ಶ್ರೀನಿವಾಸಯ್ಯ ತಿಳಿಸಿದ್ದಾರೆ.
ಅವರು ತಾಲೂಕಿನ ಹೆನ್ನಾಗರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿ ಕೃಷಿ ಚಟುವಟಿಕೆಗಳಿಗೆ ಸಹಕಾರಿ ಬ್ಯಾಂಕು ಸದಸ್ಯರಿಗೆ ಸಾಲ ಸೌಲಭ್ಯ ನೀಡುತ್ತಿದ್ದು ಬೆಳೆ ಬಂದ ನಂತರ ಸಾಲ ತೀರುವಳಿ ಮಾಡಿ ಇತರ ರೈತರಿಗೆ ಸಾಲ ಸೌಲಭ್ಯ ದೊರೆಯುವಂತೆ ಮಾಡಬೇಕೆಂದು ಕೋರಿದರು.
ಸ್ತ್ರಿಶಕ್ತಿ ಸ್ವಸಹಾಯ ಗುಂಪುಗಳಿಗೆ ವಾರ್ಷಿಕ ಶೇ. 4 ಬಡ್ಡಿ ದರದಲ್ಲಿ ಗರಿಷ್ಠ 5 ಲಕ್ಷ ಅಥವಾ ಉಳಿತಾಯ ಹಣದ ದುಪ್ಪಟ್ಟು ಸಾಲ ನೀಡಲಾಗುವುದು. ಯೋಜನೆಯ ಸದುಪಯೋಗ ಪಡೆದುಕೊಂಡು ಮಹಿಳೆಯರು ಸ್ವಾವಲಂಬಿ ಬದುಕು ನಡೆಸಬೇಕೆಂದು ತಿಳಿಸಿದರು. ಉಪಾಧ್ಯಕ್ಷ ಗುರುದೇವ್ ಮಾತನಾಡಿ ಬ್ಯಾಂಕಿನಲ್ಲಿ ಮಾಸಿಕ ಶೇ. 1 ಬಡ್ಡಿ ದರದಲ್ಲಿ ಚಿನ್ನದ ಒಡವೆಗಳ ಮೇಲೆ ಸಾಲ ನೀಡಲಾಗುವುದು. ಕೆಲವೇ ನಿಮಿಷಗಳಲ್ಲಿ ಭದ್ರತೆಯ ಜೊತೆಗೆ ಸಿಗುವ ಸಾಲ ಸೌಲಭ್ಯ ಪಡೆದು ವ್ಯಾಪಾರ ವಹಿವಾಟು ಉತ್ತಮ ಪಡಿಸಿಕೊಳ್ಳಲು ಕೋರಿದರು. ನಿರ್ದೇಶಕರಾದ ಕೆ. ರಮೇಶ್, ಎಂ. ಬಾಬು, ಭದ್ರರೆಡ್ಡಿ, ಕೆ.ಸಿ. ಬಸವರಾಜು, ಆರ್. ಸಿದ್ದರಾಜು ವಡೆಯರ್, ಎಸ್. ಗಂಗಪ್ಪ, ಚಂದ್ರಮ್ಮ, ಜಗದಾಂಬ ಸಭೆಯಲ್ಲಿದ್ದರು. ಸಿಇಒ ಚಂದ್ರಪ್ಪ ಬ್ಯಾಂಕಿನ ಆಡಿಟರ್ ವರದಿ ಮಂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement