ಶ್ರೇಷ್ಠದಾರ್ಶನಿಕ ರಾಮಕೃಷ್ಣ ಪರಮ ಹಂಸ
ಚನ್ನಪಟ್ಟಣ: ಎಲ್ಲಾ ಧರ್ಮಗಳೂ ಭಗವಂತನನ್ನು ಹುಡುಕುವ ಮಾರ್ಗ ಎಂಬ ಧರ್ಮಸಾರವನ್ನು ಜಗತ್ತಿಗೆ ಸಾರಿದ ಶ್ರೇಷ್ಠದಾರ್ಶನಿಕ ರಾಮಕೃಷ್ಣ ಪರಮ ಹಂಸ ಎಂದು ಮೂಳೆ ಮತ್ತು ಕೀಲು ತಜ್ಞ ಡಾ. ಆರ್.ಎಂ ಮಲುವೇಗೌಡ ಅಭಿಪ್ರಾಯಪಟ್ಟರು. ಪಟ್ಟಣದ ಮಾತೃಶ್ರೀ ಆಸ್ಪತ್ರೆಯ ವಿವೇಕಾನಂದ ಸಭಾಂಗಣದಲ್ಲಿ ಸನ್ರೈಸ್ ಯುವ ಟ್ರಸ್ಟ್ ಹಮ್ಮಿ ಕೊಂಡಿದ್ದ ರಾಮಕೃಷ್ಣ ಪರಮಹಂಸರ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಸೀದಿ, ಚರ್ಚ್ಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಂಡು ಧಾರ್ಮಿಕ ಸಹಿಷ್ಣುತೆಯನ್ನು ಬಿತ್ತಿದ ಏಕೈಕ ದಾರ್ಶನಿಕರು ಎಂದರು.
ಹಿರಿಯ ಕನ್ನಡ ಪರ ಹೋರಾಟಗಾರ ಸಿಂ.ಲಿಂ.ನಾಗರಾಜು ಮಾತನಾಡಿದರು.ಕಾರ್ಯಕ್ರಮದಲ್ಲಿ ಪತ್ರಕರ್ತ ಸು.ನಾ.ನಂದಕುಮಾರ್, ಚಿನ್ನಗಿರೀಗೌಡ, ಲಕ್ಷ್ಮೀಪತಿ, ಕಸಾಪ ನಿಕಟಪೂರ್ವ ಅಧ್ಯಕ್ಷ ತೋಟದಮನೆಕೃಷ್ಣೇಗೌಡ, ಟ್ರಸ್ಟ್ನ ಕಾರ್ಯದರ್ಶಿ ರಾಂಪುರ ಶ್ರೀನಿವಾಸ್, ಭಾರತ್ ವಿಕಾಸ್ ಪರಿಷತ್ ಅಧ್ಯಕ್ಷ ವಸಂತಕುಮಾರ್, ಎಲೇಕೇರಿ ರಾಜಶೇಖರ್, ಸೀಬನಹಳ್ಳಿ ಸವಾಮಿ, ಮಂಜೇಶ್ಬಾಬು, ರವಿಕುಮಾರ್ ತೊರೆಹೊಸೂರು, ರಾಂಪುರ ಸಿದ್ದರಾಜು ಮುಂತಾದವರು ಉಪಸ್ಥಿತರಿದ್ದರು.