ಸ್ಟೌವ್ ಸಿಡಿದು ಮಹಿಳೆ ಸಾವು
ಸೂಲಿಬೆಲೆ: ಇಲ್ಲಿಗೆ ಸಮೀಪದ ಯನಗುಂಟೆ ಗ್ರಾಮದಲ್ಲಿ ಸೀಮೆ ಎಣ್ಣೆ ಸ್ಟೌವ್ ಸಿಡಿದು ಮಹಿಳೆಯೊಬ್ಬಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಫೆ.24 ರಂದು ನಡೆದಿದೆ. ಸುಜಾತಮ್ಮ(42) ಸಾವನ್ನಪ್ಪಿರುವ ಮಹಿಳೆ. ಫೆ.24 ರಂದು ಸಂಜೆ ಅಡಿಗೆ ಮಾಡಲೆಂದು ಸೀಮೆಎಣ್ಣೆ ಸ್ಟೌವ್ ಹಚ್ಚುವಾಗ ಆಕಸ್ಮಿಕವಾಗಿ ಸ್ಟೌವ್ ಸಿಡಿದು ಸುಜಾತಮ್ಮ ತೀವ್ರ ಗಾಯಗೊಂಡಳು. ತಕ್ಷಣ ಸ್ಥಳೀಯರು ಈಕೆಯನ್ನು ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ದಾಖಲಿಸಿದ್ದು ,ಹೆಚ್ಚಿನ ಚಿಕಿತ್ಸೆಗಾಗಿ ಈಕೆಯನ್ನು ಬೆಂಗಳೂರಿನ ವಿಕ್ಟೋರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅದೇ ದಿನ ರಾತ್ರಿ 11 ಗಂಟೆ ವೇಳೆಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸೂಲಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.