ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇಂದು ಮುಕ್ತಾನಾಥೇಶ್ವರ ಸ್ವಾಮಿಗೆ ರುದ್ರಾಭಿಷೇಕ

Rashmi Kasaragodu
Updated On : 27 Feb 2014, 1:44 am

ನೆಲಮಂಗಲ: ತಾಲೂಕಿನ ಬಿನ್ನಮಂಗಲ ಗ್ರಾಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಗುರುವಾರದಂದು ಬೆಳಿಗ್ಗೆ 5.30ರಿಂದ 9.30ರವರೆಗೆ  ಶ್ರೀ ಮುಕ್ತಾನಾಥೇಶ್ವರ ಸ್ವಾಮಿಗೆ ರುದ್ರಾಭಿಷೇಕ ಹಾಗೂ ರಾತ್ರಿ 9 ಗಂಟೆಗೆ ದೂರದರ್ಶನ ಮತ್ತು ಆಕಾಶವಾಣಿ ಹೆಸರಾಂತ ಗಾಯಕಿಯರಾದ ರಂಗಮಣಿ ಮತ್ತು ಕೆ.ಕೆ.ಸರಸ್ವತಿ  ಸಹೋದರಿಯರಿಂದ ದೇವರನಾಮ ಗಾಯನಗಳನ್ನು ಏರ್ಪಡಿಸಲಾಗಿದೆ ರಾತ್ರಿ 10ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ನಿರಂತರ ಶಿವನ ಅಭಿಷೇಕ ಮತ್ತು ಪೂಜೆಗಳನ್ನು ಏರ್ಪಡಿಸಲಾಗಿದೆ.


ದೊಡ್ಡಬಳ್ಳಾಪುರಕ್ಕೆ ದೇವೇಗೌಡ ಭೇಟಿ

ದೊಡ್ಡಬಳ್ಳಾಪುರ: ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ದೊಡ್ಡಬಳ್ಳಾಪುರ ನಗರಕ್ಕೆ ಬುಧವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭೇಟಿ ನೀಡಿದ್ದರು.
ಇಲ್ಲಿನ ಸಂಸ್ಕೃತ ವಿದ್ವಾನ್ ಶ್ರೀನಿವಾಸ ರಾಘವನ್ ಅವರ ಮನೆಯಲ್ಲಿ ನಡೆದ ಮದುವೆ ಕಾರ್ಯಕ್ರಮ ಒಂದರ ಅಂಗವಾಗಿ ಅವರು ಕೊಂಗಾಡಿಯಪ್ಪ ರಸ್ತೆ ಕ್ರಾಸ್‌ನಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ವಧು-ವರರನ್ನು ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಕಾರ್ಯಕರ್ತರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ ದೇವೇಗೌಡರು, ಸಂಘಟನೆ ಮತ್ತು ನಾಯಕತ್ವದ ಕುರಿತು ನೆರೆದಿದ್ದ ತಮ್ಮ ಬೆಂಬಲಿಗ ಕಾರ್ಯಕರ್ತರಿಗೆ ವಿವರಿಸಿದರು. ಜೆಡಿಎಸ್‌ನ ಅನೇಕ ಸ್ಥಳೀಯ ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement