ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಿಜೆಪಿ ಸಿಂಹ ಜಯದ ಬೇಟೆಗೆ ಹೊರಟಾಯ್ತು

Rashmi Kasaragodu
Updated On : 27 Feb 2014, 1:45 am

ದೊಡ್ಡಬಳ್ಳಾಪುರ: ಮಲಗಿದ್ದ ಸಿಂಹ ಎದ್ದಾಯ್ತು. ಇದೀಗ ಜಯದ ಬೇಟೆಗೆ ಹೊರಟಿರುವ ಬಿಜೆಪಿ ಸಿಂಹವನ್ನು ಯಾರಿಂದಲೂ ತಡೆಯಲಾಗದು. ದೇಶದೆಲ್ಲೆಡೆ ಬಿಜೆಪಿಯ ಬಿರುಗಾಳಿ ಬೀಸುತ್ತಿದೆ. ದೇಶಭಕ್ತ ನರೇಂದ್ರಮೋದಿ ಭಾರತದ ಪ್ರಧಾನಿ ಆಗುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಇಲ್ಲಿನ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಚುನಾವಣೆ ಆದ್ಮೇಲೆ ವೀರಪ್ಪ ಮೊಯ್ಲಿ ಅವರಿಗೆ ಈ ಕ್ಷೇತ್ರದಲ್ಲಿ ಅಡ್ರೆಸ್ ಇರಲ್ಲ. 5 ವರ್ಷದ ನಿರ್ಲಕ್ಷ್ಯ ರಾಜಕಾರಣಕ್ಕೆ ಜನ ತಕ್ಕಶಾಸ್ತಿ ಮಾಡ್ತಾರೆ. 63 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮಾದರಿ ಕ್ಷೇತ್ರಾಭಿವೃದ್ಧಿಗಾಗಿ ಬಚ್ಚೇಗೌಡರನ್ನು ಬೆಂಬಲಿಸಿ ಎಂದು ಹೇಳುವ ಮೂಲಕ ಮಾಜಿ ಸಚಿವ ಬಿ.ಎನ್. ಬಚ್ಚೇಗೌಡರೇ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಎಂಬುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement