ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಉದ್ಯಮಿ ಕೃಷ್ಣಪ್ಪ ಹತ್ಯೆ; ಮೂವರು ವಶಕ್ಕೆ

Rashmi Kasaragodu
Updated On : 28 Feb 2014, 1:36 am

ಬೆಂಗಳೂರು: ಉದ್ಯಮಿ ಕೃಷ್ಣಪ್ಪ ಅವರ ಕೊಲೆಗೆ ಸಂಬಂಧಿಸಿ ಜ್ಞಾನಭಾರತಿ ಪೊಲೀಸರು ಮೂವರು ಆರೋಪಿಗಳನ್ನು ಗುರುವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ಮೂಲದ ಮಧು, ಮರಿಸಿದ್ದ ಹಾಗೂ ಚೇತನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಮುಖ ಆರೋಪಿ ಹಾಗೂ ಕೃಷ್ಣಪ್ಪ ಅವರ ಎರಡನೇ ಹೆಂಡತಿ ಇನ್ನೂ ಪತ್ತೆಯಾಗಿಲ್ಲ. ಆದರೆ ಆರೋಪಿಗಳ ಬಂಧನವನ್ನು ಖಚಿತಪಡಿಸಲು ಪಶ್ಚಿಮ ವಿಭಾಗದ ಡಿಸಿಪಿ ಲಾಭೂರಾಮ್ ನಿರಾಕರಿಸಿದ್ದಾರೆ. ನಗರದ ಐಟಿಐ ಬಡಾವಣೆಯ ಮೈದಾನದಲ್ಲಿ ಮಂಗಳವಾರ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಕೃಷ್ಣಪ್ಪ ಅವರನ್ನು ಕಿಡ್ನಾಪ್ ಮಾಡಲಾಗಿತ್ತು. ಚನ್ನಪಟ್ಟಣದ ಕಣ್ವ ಬಡಾವಣೆ ಚರಂಡಿಯಲ್ಲಿ ಕೃಷ್ಣಪ್ಪ ಶವ ಬುಧವಾರ ಪತ್ತೆಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement